ನಮಗೆ ಸಿಗುವ ಹಾಗೂ ಎಟುಕುವ ವಸ್ತುಗಳು ಬೇಕಾದರೆ ನಾವೆ ತೆಗೆದುಕೊಳ್ಳತ್ತೇವೆ. ಯಾವುದು ನಮ್ಮಿಂದ ಸಾಧ್ಯವಿಲ್ಲವೊ ಅದನ್ನು ದೇವರ ಮೇಲೆ ಭಾರ ಹಾಕಿ ನಮ್ಮ ಕೆಲಸ ಕಡಿಮೆ ಮಾಡಿಕೊಳ್ಳುತ್ತೇವೆ. ನಮಗೆ ಬೇಕಾದ ಹಾಗೆ ಬಳಸಿಕೊಳ್ಳುವ ದೊಡ್ಡ ಗುಣ ನಮ್ಮದು ಮಾನವ ಎಷ್ಟು ಬೆಳಿದು ನಿಂತರು ತನ್ನ ಮೊಂಡತನವನ್ನು ಮಾತ್ರ ಬಿಡುತ್ತಿಲ್ಲ ಬರಿ ಬಾಯಿ ಮಾತಲ್ಲಿ ಹಲವು ಗೋಪುರಗಳ ಕಟ್ಟಿ ಅದರ ಮುಂದೆ ಕೂತು ಹೊಸ ಮಾತು ಹಳೆಯ ಭಾವದೊಂದಿಗೆ ಆಡುತ್ತ ಕಾಲ ಕಳಿಯುತ್ತಿರುವುದು ಕಂಡುಬರುತ್ತಿದೆ . ಹಾಗಾದರೆ ಮನುಷ್ಯ ಇನ್ನು ಉತ್ತಮನಾಗಲು ಈ ಆಧ್ಯಾತ್ಮದ ಕೆಲವು ಆಚಾರ ವಿಚಾರಗಳನ್ನು ತಿಳಿಯಲೇಬೇಕು ಅದರತ್ತ ಮನಸ್ಸು ಹೊರಳಿಸಲೇಬೇಕು ಎನ್ನುವುದು ತಿಳಿಯಬೇಕು ಅವು ಯಾವುವು ಅಂದರೆ
ಪೋಜೆ : ನಾವು ನಂಬಿದ ಯಾವುದೆ ವಸ್ತುವಿಗೆ ಪೂಜೆ ಮಾಡಿದರೆ ನಮ್ಮ ಬದುಕಿನಲ್ಲಿ ಅನೇಕ ಬದಲಾವಣೆ ನಾವು ಕಾಣಬಹುದಾಗಿದೆ. ಈ ಪೂಜೆ ಎನ್ನುವುದು ಅನೇಕ ನಮ್ಮ ಜೀವನದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಅವಕಾಶ ಮಾಡಿಕೊಡುವುದೆ ಈ ಪೂಜೆ , ನಮ್ಮ ಅನಿಷ್ಠ ಕೆಲಸಗಳನ್ನು ಹಿಡಿತದಲ್ಲಿಡಲು, ಸಾಮಾಜಿಕ ದುರ್ಘಟನೆಗಳನ್ನು ತಡೆಗಟ್ಟಲು, ನಮ್ಮನ್ನು ನಾವು ನಿಯಂತ್ರಿಸಲು , ಪೂಜೆಯ ನೆಪದಲ್ಲಿ ಆದರು ನಾವು ಸ್ವಚ್ಛವಾಗಿರಬಹುದು , ಪೂಜೆಗೆ ಮುನ್ನ ತೊಳೆಯುವ ಜಳಕ ವೈಜ್ಞಾನಿಕ ಸತ್ಯ , ನಮ್ಮ ಮೈಮೇಲಿನ ಹೊಲಸು ಹೋಗಲು ಪೂಜೆ ಪ್ರೇರೆಪಿಸುತ್ತದೆ , ಮನದ ಆಸೆ ಈಡೆರಿಸಿಕೊಳ್ಳು ಲು ಮಾಡುವುದೆ ಪೂಜೆ , ಪೂಜೆಯ ವೇಳೆಯಲ್ಲಿ ಬಳಸುವ ಎಣ್ಣೆ ಆಮ್ಲಜನಕ ನೀಡುತ್ತದೆ , ಹೋಮ ಹವನಗಳಲ್ಲಿ ಬಳಸುವ ಬಣ್ಣ ಎಣ್ಣೆ , ಇದರಿಂದ ದಾನ ದರ್ಮದ ಕಲ್ಪನೆ ಬೆಳಿಯುತ್ತದೆ , ನಾನು ನನ್ನವರು ಎನ್ನುವ ಭಾವೆನ ಬೆಳಿಯುತ್ತದೆ. ವಿಚಾರ ವಿನಿಯಮ ಸಾಧ್ಯವಾಗಿದೆ , ಮಾನಸಿಕ ನೆಮ್ಮದಿ ದೊರೆಯುತ್ತದೆ , ವೈಚಾರಿಕತೆ ಪ್ರಜ್ಞೆ ಬೆಳಿಯುತ್ತದೆ , ಬದುಕಿನಲ್ಲಿ ಇನ್ನು ಬದುಕುವ ಆಸೆ ಹೆಚ್ಚುತ್ತದೆ , ಭಯದ ವಾತಾವರಣ ನಿರ್ಮಾಣವಾಗುತ್ತದೆ ಭಯದಿಂದದಾರು ಮನುಷ್ಯ ಕೆಟ್ಟ ಕೆಲಸಗಳಿಂದ ದೂರ ಸರಿಯುತ್ತಾನೆ , ಸಾಂಘಿಕ ಜೀವನ ನಡೆಸಬಹುದಾಗಿದೆ ಸಮೃದ್ಧಿಯ ಬದುಕು ಸುಗಮವಾಗುತ್ತದೆ
ತಿಲಕ : ಭಯದ ಕಲ್ಪನೆ , ಶಕ್ತಿಯ ಕಲ್ಪನೆ , ದೇಹಕ್ಕೆ ಆಯಾಸವಾಗುವುದಿಲ್ಲಾ , ಕೆಟ್ಟ ದೃಷ್ಠಿಯಿಂದ ಮುಕ್ತಿ , ಬೆವರು ಬಿಟ್ಟಾಗ ಅದರ ತೇವಾಂಶ ಕಡಿಮೆ ಮಾಡಲು ಈ ತಿಲಕ ಇಡುತ್ತಾರೆ. ಈ ಬಣ್ಣದ ಶಕ್ತಿಯಲ್ಲಿ ಮಾನವ ನಿರ್ಮಾಣದ ಕನಸು ಕಾಣುವ ದೃಷ್ಠಿ ಹೊಂದಿ ನಮ್ಮ ಬದುಕು ಹಸನಾಗಿಸಲು ಅವಕಾಶ ಮಾಡಿಕೊಡುವುದು ಈ ಆಧ್ಯಾತ್ಮದ ತಿಲಕ ನಮ್ಮ ಹಲವು ಕರ್ಮಗಳ ತೊಳಿವುದು ಈ ತಿಲಕ ಪ್ರೀತಿ ಬಾಂಧವ್ಯ ಬೆಳಿಸುವುದು ಈ ತಿಲಕ ನೋಡುಗರ ಕಣ್ಣಿಗೆ ಮನಸ್ಸಿಗೆ ಮದ ನೀಡುವ ಶಕ್ತಿ ಈ ತಿಲಕಕ್ಕೆ ಇದೆ.
ಹೀಗೆ ಅನೇಕ ವಸ್ತುಗಳು ಈ ಆಧ್ಯಾತ್ಮದಲ್ಲಿ ಅವಶ್ಯಕ ಹಾಗೂ ಮಹತ್ವದ ಸ್ಥಾನ ಹೊಂದಿವೆ ನಾವು ಅವುಗಳ ಸರಿಯಾದ ಬಳಕೆ ಮತ್ತು ಉಳಿಕೆ ಮಾಡಿಕೊಳ್ಳಬೇಕಾದ ಅಗತ್ಯ ಅನಿವಾರ್ಯವಿದೆ . ನೈಜವಾಗಿ ಅವುಗಳ ಹಿಂದಿನ ಅರ್ಥ ಮತ್ತು ಕಲ್ಪನೆ ಮಾಡಿಕೊಂಡರೆ ಅವುಗಳ ಉತ್ತಮ ಬಳಕೆ ಮಾಡಿಕೊಂಡು ಅವುಗಳ ಅರ್ಥಕೆಡಿಸದಂತೆ ಮಾಡಿ ನಮ್ಮ ಬದುಕು ಹಸನಾಗಿಸಿಕೊಳ್ಳೋಣವೆ ?