ಮರುಬಳಕೆ :
ಮರುಬಳಕೆಯು ಉಪಯೋಗಿಸಿದ ವಸ್ತುಗಳನ್ನು ಹೊಸ ಉತ್ಪನ್ನಗಳಾಗಿ ತಯಾರಿಸುವುದನ್ನು ಒಳಗೊಳ್ಳುತ್ತದೆ. ಇದನ್ನು ಹೆಚ್ಚು ಉಪಯುಕ್ತ ವಸ್ತುಗಳು ವ್ಯರ್ಥವಾಗಿ ಹೋಗದಂತೆ ತಡೆಯಲು, ತಾಜಾ ಕಚ್ಚಾ ವಸ್ತುಗಳ ಅಪವ್ಯಯ ಮಾಡುವುದನ್ನು ಕಡಿಮೆ ಮಾಡಲು, ಇಂಧನಗಳ ಬಳಕೆ ಕಡಿಮೆ ಮಾಡಲು, ವಾಯು ಮಾಲಿನ್ಯ ದಹನದ ಪ್ರಕ್ರಿಯೆ ಮಾಡುವುದರಿಂದ ಆಗುವ ಮತ್ತು ಜಲಮಾಲಿನ್ಯವನ್ನು ಭೂಮಿಯೊಳಗೆ ಬೇಡದ ವಸ್ತುಗಳನ್ನು ಹೂತುಹಾಕುವುದರಿಂದ ಆಗುವ ಕಡಿಮೆ ಮಾಡಲು ನಡೆಸಲಾಗುತ್ತದೆ. ಅಲ್ಲದೆ ಕಚ್ಚಾ ವಸ್ತುಗಳಿಂದ ತಯಾರಿಸುವುದಕ್ಕಿಂತ ಕಡಿಮೆ ಮಟ್ಟದ ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ಹೊಂದಿರುತ್ತದೆ. ಅನೇಕ ರಿತಿಯ ವಸ್ತಗಳನ್ನು ಮರುಬಳಕೆ ಮಾಡಬಹುದು ಅವು ಯಾವವು ಎಂದರೆ. ಗಾಜು,ಕಾಗದ,ಲೋಹ,ಪ್ಲ್ಯಾಸ್ಟಿಕ್, ಬಟ್ಟೆ ಮತ್ತು ಇಲೆಕ್ಟ್ರಾನಿಕ್ ಸಂಬಂಧಿತ ವಸ್ತುಗಳು. ಬಹುಹಿಂದಿನಿಂದ ಕ್ರಿ.ಶ 400ರಲ್ಲಿನ ಪ್ಲೇಟೊನ ಕಾಲದಿಂದಲೇ ಈ ವಿಷಯ ದಾಖಲಾಗಿದೆ. ಸಂಪನ್ಮೂಲಗಳು ದುರ್ಲಭವಾಗಿದ್ದಾಗ, ಪುರಾತತ್ವ ಶಾಸ್ತ್ರದ ಅಧ್ಯಯನಗಳು ಪ್ರಾಚೀನ ಕಾಲದ ತ್ಯಾಜ್ಯ ರಾಶಿಗಳು ಕಡಿಮೆ ಮಟ್ಟದ ಮನೆಯ ತ್ಯಾಜ್ಯಗಳನ್ನು ಬೂದಿ, ಒಡೆದ ಪರಿಕರಗಳು ಮತ್ತು ಮಡಿಕೆಯಂತಹ ಹೊಂದಿದ್ದವೆಂದು ತೋರಿಸುತ್ತವೆ. ಇದರಿಂದ ಹೊಸ ವಸ್ತುಗಳಿರದಿದ್ದಾಗ ಹೆಚ್ಚಿನ ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡಲಾಗುತ್ತಿತ್ತು ಎಂಬುದು ತಿಳಿಯುತ್ತದೆ.
ಶಾಸನ ರಚನೆ:
ಮರುಬಳಕೆ ಯೋಜನೆಯು ಕೆಲಸ ಮಾಡಲು ಪುನಃಬಳಸಬಹುದಾದ ವಸ್ತುಗಳ ಅತಿದೊಡ್ಡ ಪ್ರಮಾಣದ, ಸ್ಥಿರ ಪೂರೈಕೆಯು ಬಹುಮುಖ್ಯ. ಅಂತಹ ಪೂರೈಕೆಯನ್ನು ಒದಗಿಸಲು ಮೂರು ಶಾಸನ ರಚನೆಯ ಆಯ್ಕೆಗಳನ್ನು ಬಳಸಿಕೊಳ್ಳಲಾಗುತ್ತದೆ: ಕಡ್ಡಾಯವಾದ ಮರುಬಳಕೆ ಸಂಗ್ರಹ, ವಸ್ತುಗಳನ್ನು ಒಟ್ಟುಗೂಡಿಸುವ ಶಾಸನ, ಮತ್ತು ತ್ಯಾಜ್ಯ ನಿಷೇಧ. ಕಡ್ಡಾಯವಾದ ಸಂಗ್ರಹ ಕಾನೂನುಗಳು ನಗರದ ತ್ಯಾಜ್ಯದಿಂದ ನಿಗದಿತ ದಿನಾಂಕದೊಳಗೆ ಕೆಲವು ವಸ್ತುಗಳನ್ನು ಹೊರತೆಗೆಯಬೇಕು ಎಂಬ ರೀತಿಯಲ್ಲಿ ನಗರಗಳಿಗೆ ಮರುಬಳಕೆ ಗುರಿಗಳನ್ನು ಗೊತ್ತುಪಡಿಸುತ್ತವೆ. ನಗರವು ನಂತರ ಈ ಗುರಿಯನ್ನು ಸಾಧಿಸುವುದಕ್ಕಾಗಿ ಕೆಲಸ ಮಾಡಲು ಜವಾಬ್ದಾರಿಯಾಗಿರುತ್ತದೆ. ವಸ್ತುಗಳನ್ನು ಒಟ್ಟುಗೂಡಿಸುವ ಶಾಸನವು, ಗಾಜು, ಪ್ಲ್ಯಾಸ್ಟಿಕ್ ಮತ್ತು ಲೋಹದಂತಹ ಕೆಲವು ವಸ್ತುಗಳನ್ನು ಹಿಂದಿರುಗಿಸಿದುದಕ್ಕೆ ಮರುಪಾವತಿ ಮಾಡುವುದನ್ನು ಒಳಗೊಳ್ಳುತ್ತದೆ. ಅಂತಹ ವಸ್ತುವಿನಲ್ಲಿ ಒಂದು ಉತ್ಪನ್ನವನ್ನು ಕೊಂಡುಕೊಂಡರೆ, ಮೂಲ ದರಕ್ಕೆ ಒಂದು ಸಣ್ಣ ಅಧಿಕ-ಬೆಲೆಯನ್ನು ಸೇರಿಸಲಾಗುತ್ತದೆ. ಗ್ರಾಹಕರು ಆ ವಸ್ತುವನ್ನು ಸಂಗ್ರಹ ಕೇಂದ್ರಕ್ಕೆ ಹಿಂದಿರುಗಿಸಿದರೆ ಈ ಅಧಿಕ-ಬೆಲೆಯನ್ನು ಅವರಿಗೆ ವಾಪಸು ನೀಡಲಾಗುತ್ತದೆ. ಈ ಯೋಜನೆಗಳು 80%ನಷ್ಟು ಮರುಬಳಕೆ ದರದೊಂದಿಗೆ ತುಂಬಾ ಯಶಸ್ವಿಯಾದವು. ಕಾರ್ಯವಿಧಾನ:
ಸಂಗ್ರಹ : ಸಾಮಾನ್ಯ ತ್ಯಾಜ್ಯ ರಾಶಿಯಿಂದ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸಲು ಅನೇಕ ರೀತಿಯ ವ್ಯವಸ್ಥೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಈ ವ್ಯವಸ್ಥೆಗಳು ಲೋಕೋಪಯೋಗಿ ಹಾಗು ಸರಕಾರದ ಸುಗಮತೆ ಮತ್ತು ಖರ್ಚಿನ ನಡುವಿನ ವಿನಿಮಯದ ಆಧಾರದ ಮೇಲೆ ನೆಲೆಸಿವೆ. ಸಂಗ್ರಹದ ಮೂರು ಪ್ರಮುಖ ವರ್ಗಗಳೆಂದರೆ - "ಕಸ ಸಂಗ್ರಹದ ಕೇಂದ್ರಗಳು", "ವಾಪಸು-ಕೊಂಡುಕೊಳ್ಳುವ ಕೇಂದ್ರಗಳು" ಮತ್ತು "ರಸ್ತೆ ಬದಿಯ ಸಂಗ್ರಹ". ಕಸ ಸಂಗ್ರಹ ಕೇಂದ್ರಗಳು ತ್ಯಾಜ್ಯ ಉತ್ಪಾದಕರು ಮರುಬಳಕೆಯ ವಸ್ತುಗಳನ್ನು ಕೇಂದ್ರ ಸ್ಥಳಕ್ಕೆ, ನೆಲೆಯಾದ ಅಥವಾ ಸಂಚಾರಿ ಸಂಗ್ರಹ-ಸ್ಥಾನಕ್ಕೆ ಅಥವಾ ಪುನಸ್ಸಂಸ್ಕರಿಸುವ ಘಟಕಕ್ಕೆ, ತೆಗೆದುಕೊಂಡು ಬರುವಂತೆ ನೋಡಿಕೊಳ್ಳುತ್ತವೆ. ಅದು ಸುಲಭ ರೀತಿಯ ಸಂಗ್ರಹ ಕಾರ್ಯವಾಗಿದೆ. ಆದರೆ ಕಡಿಮೆ ಮತ್ತು ಊಹಿಸಲಾಗದ ಪ್ರಮಾಣವನ್ನು ಮಾತ್ರ ಹೇಳಲಾಗದೆಂಬ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ವಾಪಸು ಕೊಂಡುಕೊಳ್ಳುವ ಕೇಂದ್ರಗಳಲ್ಲಿ ಶುದ್ಧ ಮರುಬಳಕೆಯ ವಸ್ತುಗಳನ್ನು ಖರೀದಿಸಲಾಗುತ್ತದೆ. ಆದ್ದರಿಂದ ಇವು ಸ್ಥಿರ ಪೂರೈಕೆಯನ್ನು ಬಳಸಲು ಮತ್ತು ರಚಿಸಲು ಸ್ಪಷ್ಟ ಪ್ರೋತ್ಸಾಹ ಒದಗಿಸುತ್ತವೆ. ಇವುಗಳಿಂದ ತಯಾರಿಸಿದ ವಸ್ತುಗಳನ್ನು ನಂತರ ಲಾಭದ ನಿರೀಕ್ಷೆಯೊಂದಿಗೆ ಮಾರಾಟ ಮಾಡಬಹುದು.
ಪ್ರತ್ಯೇಕಿಸುವಿಕೆ :
ಒಮ್ಮೆ ಒಟ್ಟಿಗೆ ಬೆರೆತ ಮರುಬಳಕೆಯ ವಸ್ತುಗಳನ್ನು ಸಂಗ್ರಹ ಮಾಡಿ, ಕೇಂದ್ರೀಯ ಸಂಗ್ರಹ ಸೌಕರ್ಯಕ್ಕೆ ಸಾಗಿಸಿದ ನಂತರ, ಬೇರೆ ಬೇರೆ ವಿಧದ ವಸ್ತುಗಳನ್ನು ಮೊದಲು ಪ್ರತ್ಯೇಕಿಸಬೇಕು. ಇದನ್ನು ಅನೇಕ ಹಂತಗಳಲ್ಲಿ ಮಾಡಲಾಗುತ್ತದೆ. ಹೆಚ್ಚಿನವು ಸ್ವಯಂಚಾಲಿತ ಕ್ರಿಯೆಗಳನ್ನು ಒಳಗೊಂಡಿರುತ್ತವೆ. ಒಂದು ಲಾರಿ-ಹೊರೆಯ ವಸ್ತುಗಳನ್ನು ಒಂದು ಗಂಟೆಯೊಳಗೆ ಸಂಪೂರ್ಣವಾಗಿ ಪ್ರತ್ಯೇಕಿಸಬಹುದು. ಕೆಲವು ಘಟಕಗಳು ಈಗ ವಸ್ತುಗಳನ್ನು ಸ್ವಯಂಚಾಲಿತವಾಗಿ ಬೇರ್ಪಡಿಸುತ್ತವೆ, ಇವನ್ನು ಒಂದೇ-ಗುಂಪಿನ ಮರುಬಳಕೆ ಎನ್ನುತ್ತಾರೆ. ಘಟಕಗಳಿರುವ ಪ್ರದೇಶಗಳಲ್ಲಿ ಮರುಬಳಕೆಯಲ್ಲಿ 30 ಶೇಕಡ ಹೆಚ್ಚಳವಾಗಿರುವುದು ಕಂಡುಬಂದಿದೆ. ಆರಂಭದಲ್ಲಿ ಒಟ್ಟಿಗೆ ಬೆರೆತ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹ ವಾಹನದಿಂದ ತೆಗೆದು, ಏಕಪದರದಲ್ಲಿ ಹರಡಿರುವ ಸಾಗಣೆ ಬೆಲ್ಟಿನಲ್ಲಿರಿಸಲಾಗುತ್ತದೆ. ರಟ್ಟಿನ ದೊಡ್ಡ ತುಂಡುಗಳು ಮತ್ತು ಪ್ಲಾಸ್ಟಿಕ್ ಚೀಲಗಳ ನಂತರ ಯಂತ್ರ ಸ್ಥಗಿತಗೊಳ್ಳಲು ಕಾರಣವಾಗಬಹುದಾದ್ದರಿಂದ ಅವನ್ನು ಈ ಹಂತದಲ್ಲಿ ಕೈಯಿಂದ ತೆಗೆದುಹಾಕಲಾಗುತ್ತದೆ.
ಕೆಲವು ವಸ್ತಗಳು ಮರುಬಳಕೆಯಿಂದ ಇಂಧನದ ಉಳಿತಾಯ ಮತ್ತು ವಾಯು ಮಾಲಿನ್ಯವನ್ನು ತಡೆಹಿಡಿಯಬಹುದಾಗಿದೆ. ಅಲ್ಯೂಮಿನಿಯಂ ಇಂಧನ ಉಳಿತಾಯ 95% , ವಾಯು ಮಾಲಿನ್ಯ ತಡೆ 95% . ಗಾಜು ಇಂಧನ ಉಳಿತಾಯ 30% ವಾಯು ಮಾಲಿನ್ಯ ತಡೆ 20% , ಕಾಗದ ಇಂಧನ ಉಳಿತಾಯ 40% ವಾಯು ಮಾಲಿನ್ಯ ತಡೆ 73% ಹೀಗೆ ಅನೇಕ ವಸ್ತಗಳು ಅನೇಕ ರೀತಿಯ ಸಾಹಾಯವಾಗಿ ನಿಂತಿವೆ.ಸಾಮಾನ್ಯ ಮರುಬಳಕೆ ಮಾಡುವಂತಹವು ಅನೇಕ ವಿವಿಧ ಪ್ರಕಾರದ ವಸ್ತುಗಳನ್ನು ಮರುಬಳಕೆ ಮಾಡಬಹುದು.
ಆದರೆ ಪ್ರತಿಯೊಂದು ಪ್ರಕಾರಕ್ಕೂ ಬೇರೆ ಬೇರೆ ತಂತ್ರಜ್ಞಾನದ ಅವಶ್ಯಕತೆ ಇರುತ್ತದೆ.
ಸಿಮೆಂಟು ಜಲ್ಲಿ ಮತ್ತು ಕಾಂಕ್ರೀಟು:
ಕಟ್ಟಡಗಳ ಕೆಡಹುವಿಕೆಯಿಂದ ಸಂಗ್ರಹಿಸಲಾದ ಕಾಂಕ್ರೀಟು ಸಿಮೆಂಟು ಜಲ್ಲಿಯನ್ನು ಹೆಚ್ಚಾಗಿ ಕಪ್ಪುರಾಳ, ಇಟ್ಟಿಗೆ, ಕಸ ಮತ್ತು ಕಲ್ಲು ಮೊದಲಾದವುಗಳೊಂದಿಗೆ ಜಜ್ಜಿಹಾಕುವ ಯಂತ್ರದೊಳಗೆ ಹಾಕಲಾಗುತ್ತದೆ. ಸಿಮೆಂಟು ಜಲ್ಲಿಯ ಸಣ್ಣ ತುಂಡುಗಳನ್ನು ಹೊಸ ನಿರ್ಮಾಣ ಯೋಜನೆಗಳಲ್ಲಿ ಜಲ್ಲಿಯಾಗಿ ಬಳಸಲಾಗುತ್ತದೆ. ಜಜ್ಜಿದ ಮರುಬಳಕೆಯ ಕಾಂಕ್ರೀಟು ಕಶ್ಮಲವನ್ನು ಹೊಂದಿಲ್ಲದಿದ್ದರೆ, ಅದನ್ನು ಹೊಸ ಕಾಂಕ್ರೀಟಿನಲ್ಲಿ ಒಣ ಸಿಮೆಂಟುಜಲ್ಲಿಯೂ ಉಪಯೋಗಿಸಲಾಗುತ್ತದೆ. ಇದು ಇತರ ಕಲ್ಲುಗಳನ್ನು ನೆಲದಿಂದ ತೋಡಿ ತೆಗೆಯುವುದನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಇದು ಮರಗಳನ್ನು ಮತ್ತು ಆವಾಸಸ್ಥಾನಗಳನ್ನು ಉಳಿಸುತ್ತದೆ.
ಬ್ಯಾಟರಿಗಳು:
ಬ್ಯಾಟರಿಗಳು ಗಾತ್ರ ಮತ್ತು ಪ್ರಕಾರಗಳಲ್ಲಿ ಅತಿಹೆಚ್ಚಾಗಿ ವ್ಯತ್ಯಾಸಗೊಳ್ಳುವುದರಿಂದ, ಅವುಗಳ ಮರುಬಳಕೆಯು ತುಂಬಾ ಕಷ್ಟಕರವಾಗಿದೆ: ಒಂದೇ ಪ್ರಕಾರದವುಗಳನ್ನು ಮೊದಲು ಬೇರ್ಪಡಿಸಬೇಕು, ನಂತರ ಪ್ರತಿಯೊಂದು ಪ್ರಕಾರಕ್ಕೂ ಬೇರೆಯೇ ಆದ ಮರುಬಳಕೆ ಕ್ರಿಯೆಯ ಅವಶ್ಯಕತೆ ಇರುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಹಳೆಯ ಬ್ಯಾಟರಿಗಳು ಪಾದರಸ ಮತ್ತು ಕ್ಯಾಡ್ಮಿಯಂ ಅನ್ನು ಹೊಂದಿರುತ್ತವೆ. ಇವು ತುಂಬಾ ಹಾನಿಕರ ಅಂಶಗಳಾಗಿರುವುದರಿಂದ ಹೆಚ್ಚು ಜಾಗೃತೆಯಿಂದ ನಿರ್ವಹಿಸಬೇಕು. ನೈಸರ್ಗಿಕವಾಗಿ ಅಧಿಕ ಹಾನಿಯನ್ನು ಉಂಟುಮಾಡುವುದರಿಂದ ಬಳಸಿದ ಬ್ಯಾಟರಿಗಳ ಯೋಗ್ಯ ಹೊರಹಾಕುವಿಕೆಗೆ ಅನೇಕ ಪ್ರದೇಶಗಳಲ್ಲಿ ಕಾನೂನಿನ ಅಗತ್ಯ ಇರುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಹೊಸ ಬ್ಯಾಟರಿಗಳು 80%ನಷ್ಟು ಮರುಬಳಸಿದ ವಸ್ತುಗಳನ್ನು ಹೊಂದಿರುವುದರೊಂದಿಗೆ ಮರುಬಳಕೆಯ ದರವು 90%ನಷ್ಟಿದೆ.
ಜೈವಿಕ ವಿಘಟನೀಯ ತ್ಯಾಜ್ಯ :
ಮಿಶ್ರಗೊಬ್ಬರ ತಯಾರಿಸಬಹದಾದ ತೋಟದ ತ್ಯಾಜ್ಯ ಡಿಗೆ ಮನೆಯ, ತೋಟದ ಮತ್ತು ಇತರ ಹಸಿರು ತ್ಯಾಜ್ಯಗಳನ್ನು, ಮಿಶ್ರ ಗೊಬ್ಬರ ತಯಾರಿಸುವ ಮೂಲಕ ಉಪಯುಕ್ತ ವಸ್ತುವಾಗಿ ಮರುಬಳಕೆ ಮಾಡಬಹುದು. ಈ ಕ್ರಿಯೆಯು ನೈಸರ್ಗಿಕ ಆಮ್ಲಜನಕ ಇರುವಲ್ಲಿ ಮಾತ್ರ ಜೀವಿಸುವ ಬ್ಯಾಕ್ಟೀರಿಯವು ತ್ಯಾಜ್ಯವನ್ನು ಫಲವತ್ತಾದ ಮಣ್ಣಾಗಿ ವಿಭಜಿಸುವಂತೆ ಮಾಡುತ್ತದೆ. ಹೆಚ್ಚಿನ ಮಿಶ್ರಗೊಬ್ಬರವನ್ನು ಮನೆಯ ತ್ಯಾಜ್ಯದಿಂದ ಮಾಡಲಾಗುತ್ತದೆ. ಪುರಸಭೆಯ ಹಸಿರು-ತ್ಯಾಜ್ಯ ಸಂಗ್ರಹ ಯೋಜನೆಗಳೂ ಅಸ್ತಿತ್ವದಲ್ಲಿದೆ. ಈ ಯೋಜನೆಗಳು ಉತ್ಪತ್ತಿಯಾದ ಫಲವತ್ತಾದ ಮಣ್ಣನ್ನು ಮಾರಾಟ ಮಾಡುವ ಮೂಲಕ ಅವುಗಳ ಬಂಡವಾಳವನ್ನು ಪೂರೈಸಿಕೊಳ್ಳುತ್ತವೆ.
ಇಲೆಕ್ಟ್ರಾನಿಕ್ಸ್ ಅಸಂಯೋಜನೆ ಮತ್ತು ಸುಧಾರಣೆ :
ಹಾಳಾದ ಒಂದು ಕಂಪ್ಯೂಟರ್ ಮಾನಿಟರ್ ಹಳೆಯ ಕಂಪ್ಯೂಟರ್ಗಳು ಮತ್ತು ಮೊಬೈಲ್ ದೂರವಾಣಿಗಳಂತಹ ವಿದ್ಯುತ್ ಸಾಧನಗಳ ನೇರವಾದ ಹೊರಹಾಕುವಿಕೆಯು, ಕೆಲವು ವಸ್ತುಗಳ ವಿಷಕಾರಿ ಅಂಶಗಳಿಂದಾಗಿ ಅನೇಕ ಪ್ರದೇಶಗಳಲ್ಲಿ ನಿಷೇಧಿಸಲ್ಪಟ್ಟಿದೆ. ಮರುಬಳಕೆ ಕ್ರಿಯೆಯು ಉಪಕರಣಗಳಲ್ಲಿರುವ ಲೋಹ, ಪ್ಲ್ಯಾಸ್ಟಿಕ್ ಮತ್ತು ವಿದ್ಯುನ್ಮಂಡಲ ಫಲಕಗಳನ್ನು ಯಾಂತ್ರಿಕವಾಗಿ ಬೇರ್ಪಡಿಸುವ ಮೂಲಕ ಕೆಲಸ ಮಾಡುತ್ತದೆ. ಇದನ್ನು ದೊಡ್ಡ ಪ್ರಮಾಣದ ಇಲೆಕ್ಟ್ರಾನಿಕ್ ತ್ಯಾಜ್ಯ ಮರುಬಳಕೆಯ ಸ್ಥಾವರಗಳಲ್ಲಿ ಮಾಡುವಾಗ, ವಸ್ತುಗಳ ಪುನರ್ಲಾಭವನ್ನು ಬೆಲೆ-ಪರಿಣಾಕಾರಿ ರೀತಿಯಲ್ಲಿ ಪಡೆಯಲಾಗುತ್ತದೆ. ಕಬ್ಬಿಣಾಂಶವನ್ನು ಹೊಂದಿರುವ ಲೋಹಗಳು ಮರುಬಳಕೆಗಾಗಿ ಪುಡಿಮಾಡಿದ ಉಕ್ಕು ಕಬ್ಬಿಣ ಮತ್ತು ಉಕ್ಕನ್ನು ತ್ಯಾಜ್ಯ ರಾಶಿಯಿಂದ ಅಯಸ್ಕಾಂತವನ್ನು ಬಳಸಿಕೊಂಡು ಬೇರ್ಪಡಿಸಬಹುದಾಗಿದೆ. ಅವು ಪ್ರಪಂಚದಲ್ಲೇ ಅತಿಹೆಚ್ಚು ಮರುಬಳಕೆಯಾಗುವ ಮತ್ತು ಸುಲಭವಾಗಿ ಪುನಸ್ಸಂಸ್ಕರಿಸಲಾಗುವ ವಸ್ತುಗಳಾಗಿವೆ. ಉಕ್ಕಿನ ಚೂರನ್ನು ವಿದ್ಯುಚ್ಚಾಲಿತ ಬಿಲ್ಲಿನಾಕಾರದ ಕುಲುಮೆಯಲ್ಲಿ ಕರಗಿಸಲಾಗುತ್ತದೆ. (90-100%ಚೂರು) ಅಥವಾ ಮೂಲ ಆಮ್ಲಜನಕ ಕುಲುಮೆಯಲ್ಲಿ ಶಕ್ತಿಯನ್ನೊದಗಿಸುವ ಭಾಗವಾಗಿ ಬಳಸಲಾಗುತ್ತದೆ. ಯಾವುದೇ ವರ್ಗದ ಉಕ್ಕನ್ನು ಉತ್ಕೃಷ್ಟ ಗುಣಮಟ್ಟದ ಹೊಸ ಲೋಹವಾಗಿ ಮರುಬಳಕೆ ಮಾಡಬಹುದು. ಉಕ್ಕನ್ನು ಪುನಃಪುನಃ ಮರುಬಳಕೆ ಮಾಡಿದಂತೆ ಅದರ ಗುಣಮಟ್ಟವು ಉತ್ತಮತೆಯಿಂದ ಕೆಳಮಟ್ಟಕ್ಕೆ ಇಳಿಯುವುದಿಲ್ಲ. ಉತ್ಪಾದಿಸಲಾದ 42% ಕಚ್ಚಾ ಉಕ್ಕು ಮರುಬಳಕೆಯಾದ ವಸ್ತುವಾಗಿದೆ.
ಗಾಜು:
ಪಾರದರ್ಶಕ, ಹಸಿರು ಮತ್ತು ಕಿತ್ತಲೆ ಹಳದಿ ಬಣ್ಣದ ಗಾಜನ್ನು ಬೇರ್ಪಡಿಸುವ ಸಾರ್ವಜನಿಕ ಗಾಜು ತ್ಯಾಜ್ಯ ಸಂಗ್ರಹ ಕೇಂದ್ರ. ಗಾಜಿನ ಸೀಸೆಗಳನ್ನು ಮತ್ತು ಜಾಡಿಗಳನ್ನು ರಸ್ತೆಬದಿಯ ವಸ್ತುಗಳನ್ನು ಸಂಗ್ರಹಿಸುವ ಲಾರಿ ಮತ್ತು ಬಾಟಲ್-ಬ್ಯಾಂಕ್ಗಳು ಒಟ್ಟುಗೂಡಿಸುತ್ತವೆ. ನಂತರ ಗಾಜನ್ನು ಬಣ್ಣದ ಆಧಾರದಲ್ಲಿ ಬೇರ್ಪಡಿಸಲಾಗುತ್ತದೆ. ಸಂಗ್ರಹಿಸಲಾದ ನಿರುಪಯೋಗಿ ಗಾಜುಸಾಮಾನು ಗಳನ್ನು ಗಾಜು ಮರುಬಳಕೆ ಮಾಡುವ ಸ್ಥಾವರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅವುಗಳ ಶುದ್ಧತೆಯನ್ನು ಪರೀಕ್ಷಿಸಲಾಗುತ್ತದೆ. ಅಲ್ಲದೇ ಕಶ್ಮಲಕಾರಕಗಳನ್ನು ತೆಗೆದುಹಾಕಲಾಗುತ್ತದೆ. ಈ ನಿರುಪಯೋಗಿ ಗಾಜುಗಳನ್ನು ಪುಡಿಮಾಡಿ, ಕಚ್ಚಾ ವಸ್ತುವಿಗೆ ಸೇರಿಸಿ, ಕುಲುಮೆಯಲ್ಲಿ ಕರಗಿಸಲಾಗುತ್ತದೆ. ನಂತರ ಇದನ್ನು ಯಾಂತ್ರಿಕವಾಗಿ ಊದಿ ಹೊಸ ಜಾಡಿಗಳಾಗಿ ಅಥವಾ ಸೀಸೆಗಳಾಗಿ ನಿರ್ದಿಷ್ಟ ಆಕಾರ ಕೊಡಲಾಗುತ್ತದೆ. ಒಡೆದ ಗಾಜನ್ನು ನಿರ್ಮಾಣ ಕೈಗಾರಿಕೆಯಲ್ಲಿಯೂ ಸಿಮೆಂಟುಜಲ್ಲಿಯಲ್ಲಿ ಮತ್ತು ಗಾಜಿನ ರಾಳದಲ್ಲಿ ಬಳಸಲಾಗುತ್ತದೆ. ಗಾಜಿನರಾಳವು ರಸ್ತೆ ನಿರ್ಮಾಣ ಕಾರ್ಯದಲ್ಲಿ ಬಳಸುವ ಒಂದು ವಸ್ತು. ಅದು ಸುಮಾರು 30%ನಷ್ಟು ಮರುಬಳಕೆಯ ಗಾಜನ್ನು ಒಳಗೊಂಡಿರುತ್ತದೆ. ಪುನಸ್ಸಂಸ್ಕರಿಸಿದಾಗ ಗಾಜಿನ ರಚನೆಯು ಕೆಡುವುದಿಲ್ಲವಾದ್ದರಿಂದ, ಅದನ್ನು ಅಪರಿಮಿತವಾಗಿ ಮರುಬಳಕೆ ಮಾಡಬಹುದು.
ಕಾಗದ:
ಕಾಗದವನ್ನು ತಿರುಳಿನ ರೂಪಕ್ಕೆ ಪರಿವರ್ತಿಸಿ ಮತ್ತು ಹೊಸದಾಗಿ ಕಡಿದ ಮರಗಳಿಂದ ಪಡೆದ ತಿರುಳಿನೊಂದಿಗೆ ಸೇರಿಸುವುದರ ಮೂಲಕ ಮರುಬಳಕೆ ಮಾಡಬಹುದು. ಮರುಬಳಕೆ ಕ್ರಿಯೆಯು ಕಾಗದದ ನಾರನ್ನು ಒಡೆಯುವುದರಿಂದ, ಪ್ರತಿ ಬಾರಿ ಕಾಗದವನ್ನು ಮರುಬಳಕೆ ಮಾಡಿದಾಗ ಅದರ ಗುಣಮಟ್ಟವು ಕಡಿಮೆಯಾಗುತ್ತದೆ. ಅಂದರೆ ಹೊಸ ನಾರಿನ ಪ್ರಮಾಣವನ್ನು ಹೆಚ್ಚು ಸೇರಿಸಬೇಕು. ಇಲ್ಲದಿದ್ದರೆ ಕಾಗದವು ಕಡಿಮೆ ಗುಣಮಟ್ಟದ ಉತ್ಪನ್ನವಾಗಿ ತಯಾರಾಗುತ್ತದೆ. ಕಾಗದದ ಯಾವುದೇ ಬರಹ ಅಥವಾ ಬಣ್ಣವನ್ನು ಮೊದಲು ಡೈಯಂಕಿಂಗ್ ಮೂಲಕ ತೆಗೆದುಹಾಕಬೇಕು. ಇದು ಭರ್ತಿ ಸಾಮಾಗ್ರಿ, ಮಣ್ಣು ಮತ್ತು ನಾರಿನ ತುಣುಕುಗಳನ್ನೂ ತೆಗೆದುಹಾಕುತ್ತದೆ. ಹೆಚ್ಚುಕಡಿಮೆ ಎಲ್ಲಾ ಕಾಗದವನ್ನು ಇಂದು ಮರುಬಳಕೆ ಮಾಡಬಹುದು. ಹೊದಿಕೆಯಿರುವ ಕಾಗದವು 20%ನಷ್ಟು ಮಣ್ಣನ್ನು ಹೊಂದಿದ್ದರೆ, ಒಂದು ಟನ್ ಹೊಳಪಿನ ಕಾಗದವು 200 ಕೆಜಿಗಿಂತಲೂ ಹೆಚ್ಚು ರಾಡಿ ಮತ್ತು 800ಕೆಜಿಗಿಂತ ಕಡಿಮೆ ನಾರನ್ನು ಉತ್ಪಾದಿಸುತ್ತದೆ.
ಪ್ಲ್ಯಾಸ್ಟಿಕ್:
ಹಡಗಿನಲ್ಲಿ ಒಯ್ಯುವ ಪ್ಲ್ಯಾಸ್ಟಿಕ್ ಬುಟ್ಟಿಗಳು
ಪ್ಲ್ಯಾಸ್ಟಿಕ್ ಮರುಬಳಕೆಯೆಂದರೆ ಚೂರಾದ ಮತ್ತು ಉಪಯೋಗವಿಲ್ಲದ ಪ್ಲ್ಯಾಸ್ಟಿಕ್ಅನ್ನು ಪುನಃಪಡೆಯುವ ಮತ್ತು ಅದನ್ನು ಉಪಯುಕ್ತ ಉತ್ಪನ್ನಗಳಾಗಿ ಪುನಸ್ಸಂಸ್ಕರಿಸುವ ಕ್ರಿಯೆ. ಗಾಜು ಅಥವಾ ಲೋಹದ ವಸ್ತುಗಳಿಗೆ ಹೋಲಿಸಿದರೆ ಪ್ಲ್ಯಾಸ್ಟಿಕ್ ಅಸಾಧಾರಣ ಸವಾಲುಗಳನ್ನು ಹೊಂದಿದೆ. ಪ್ಲ್ಯಾಸ್ಟಿಕ್ಗಳಲ್ಲಿ ಅನೇಕ ವಿಧಗಳಿರುವುದರಿಂದ, ಪ್ರತಿಯೊಂದೂ ಒಂದು ರಾಳ ಗುರುತಿಸುವ ಸಂಕೇತವನ್ನು ಹೊಂದಿರುತ್ತವೆ. ಅಲ್ಲದೇ ಅವನ್ನು ಮರುಬಳಕೆ ಮಾಡುವ ಮೊದಲು ಬೇರ್ಪಡಿಸಬೇಕು. ಇದು ಹೆಚ್ಚು ದುಬಾರಿಯಾಗಿರುತ್ತದೆ; ಲೋಹಗಳನ್ನು ವಿದ್ಯುತ್ಕಾಂತಗಳನ್ನು ಬಳಸಿಕೊಂಡು ಪ್ರತ್ಯೇಕಿಸಬಹುದು, ಆದರೆ ಪ್ಲ್ಯಾಸ್ಟಿಕ್ ಗಳಿಗೆ ಅಂತಹ ಯಾವುದೇ 'ಸುಲಭವಾಗಿ ಬೇರ್ಪಡಿಸುವ' ವಿಧಾನಗಳಿಲ್ಲ. ಇದಕ್ಕೆ ಹೆಚ್ಚುವರಿಯಾಗಿ, ಮುಚ್ಚಳಗಳನ್ನು ಹೆಚ್ಚಾಗಿ ವಿವಿಧ ರೀತಿಯ ಮರುಬಳಕೆ-ಮಾಡಲಾಗದ ಪ್ಲ್ಯಾಸ್ಟಿಕ್ ಗಳಿಂದ ಮಾಡಲಾಗಿರುವುದರಿಂದ ಸೀಸೆಗಳಿಂದ ಗುರುತುಪಟ್ಟಿಗಳನ್ನು ಮರುಬಳಕೆಗಾಗಿ ತೆಗೆದುಹಾಕಬಾರದು. ವಿವಿಧ ಪ್ಲ್ಯಾಸ್ಟಿಕ್ ವಸ್ತುಗಳಲ್ಲಿರುವ ಅಂಶಗಳನ್ನು ಗುರುತಿಸಲು, ಆರು ಸಾಮಾನ್ಯ ಪ್ರಕಾರದ ಮರುಬಳಕೆ ಮಾಡಲಾಗುವ ಪ್ಲ್ಯಾಸ್ಟಿಕ್ ರಾಳಗಳಿಗೆ 1-6ರವರೆಗಿನ ರಾಳ ಗುರುತಿಸುವ ಸಂಕೇತ ಸಂಖ್ಯೆಗಳನ್ನು ಸೂಚಿಸಲಾಗಿದೆ. ಈ ಸಂಖ್ಯೆಗಳು ಪ್ಲ್ಯಾಸ್ಟಿಕ್ ಅನ್ನು ಮರುಬಳಕೆ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸುತ್ತವೆ. ಸಂಖ್ಯೆ 7 ಬೇರೆ ಬೇರೆ ಯಾವುದೊ ಪ್ಲ್ಯಾಸ್ಟಿಕ್ ಪ್ರಕಾರವನ್ನು ಸೂಚಿಸುತ್ತದೆ. ಈ ಪ್ರತಿಯೊಂದು ರಾಳ ಸಂಕೇತಗಳನ್ನು ಸಂಯೋಜಿಸುವ ಪ್ರಮಾಣಿತ ಗುರುತಗಳು ಲಭ್ಯ ಇವೆ.
ಮರ:
ಮರುಬಳಕೆಗಾಗಿ ಒಟ್ಟುಗೂಡಿಸಿರುವ ಮರದ ಹಲಗೆಗಳ ರಾಶಿ. ಮರದ ಮರುಬಳಕೆಯು ನೈಸರ್ಗಿಕವಾಗಿ ಸ್ನೇಹಪೂರ್ಣವಾದುದೆಂಬ ಭಾವನೆ ಇರುವುದರಿಂದ ಇದು ಹೆಚ್ಚು ಜನಪ್ರಿಯಾಗಿದೆ. ಗ್ರಾಹಕರು ಸಾಮಾನ್ಯವಾಗಿ ಮರುಬಳಕೆಯ ಮರವನ್ನು ಕೊಂಡುಕೊಳ್ಳುವುದರಿಂದ ಕಚ್ಚಾ ಮರದ ಬೇಡಿಕೆಯು ಕಡಿಮೆಯಾಗುತ್ತದೆ. ಅಲ್ಲದೇ ಇದರಿಂದ ಪರಿಸರಕ್ಕೆ ಉಪಯೋಗವಾಗುತ್ತದೆ, ಎಂದು ನಂಬಿದ್ದಾರೆ. ಗ್ರೀನ್ಪೀಸ್ ಅದರ ವೆಬ್ಸೈಟ್ನಲ್ಲಿ ಮರುಬಳಕೆಯ ಮರವನ್ನು ಹೆಚ್ಚು ಯೋಗ್ಯವಾದ ಮರದ-ಮೂಲವೆಂದು ನಮೋದಿಸುವ ಮೂಲಕ, ಇದು ನೈಸರ್ಗಿಕವಾಗಿ ಅನುಕೂಲಕರವಾದ ಉತ್ಪನ್ನವೆಂದು ಹೇಳಿದೆ. ಮರುಬಳಕೆಯ ಮರವನ್ನು ನಿರ್ಮಾಣ ಉತ್ಪನ್ನವಾಗಿ ಬಳಸುವುದು ಉದ್ಯಮವನ್ನು ಬೆಳೆಸುವುದರಲ್ಲಿ, ಗ್ರಾಹಕರಲ್ಲಿ ಅರಣ್ಯನಾಶದ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿ ಸಫಲವಾಗಿವೆ. ಮರದ ಮಿಲ್ಲುಗಳು ಹೆಚ್ಚು ನಿಸರ್ಗ-ಸ್ನೇಹಿ ಕ್ರಿಯೆಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಮರದ ಮರುಬಳಕೆಯು ಇತ್ತೀಚಿನ ವರ್ಷಗಳಲ್ಲಿ ನಮ್ಮ ಜೀವನದಲ್ಲಿ ಅತಿಮುಖ್ಯ ಪಾತ್ರವಹಿಸಿದ ವಿಷಯವಾಗಿದೆ. ಅನೇಕ ಸ್ಥಳೀಯ ಸಂಸ್ಥೆಗಳು ಮರುಬಳಕೆಯ ಯೋಚನೆಯನ್ನು ಹೊಂದಿದ್ದರೂ, ಅವು ಸಂಪೂರ್ಣ ಬೆಂಬಲ ನೀಡದೇ ಇರುವುದು ಮುಖ್ಯ ಸಮಸ್ಯೆಯಾಗಿದೆ. ಸುದ್ದಿಯಲ್ಲಿರುವ ಒಂದು ಪ್ರಮುಖ ವಿಷಯವೆಂದರೆ, ಮರುಬಳಕೆಯ ಮರಗಳು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಅವುಗಳೆಂದರೆ ಮರುಬಳಕೆಯ ಮರ, ದಿಮ್ಮಿ ಮತ್ತು ಇತರ ಮರಗಳು.
ಹೀಗೆ ಪ್ರಕೃತಿಯಲ್ಲಿ ದೊರೆಯುವ ಅದೆಷ್ಟೊ ವಸ್ತುಗಳನ್ನು ನಾವು ಬೀದಿಗೆ ಎಸೆದು ನಮ್ಮ ಪರಿಸರವನ್ನು ನಾವೆ ಕೈಯಾರೆ ಹಾಳು ಮಾಡುತ್ತಿದ್ದೇವೆ. ನಮ್ಮ ಭವಿಷ್ಯದ ಮೇಲೆ ನಾವೆ ಕಲ್ಲು ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಕೆಲವು ವಸ್ತಗಳನ್ನು ಮಾತ್ರ ಮರುಬಳಕೆಗೆ ಉಲ್ಲೇಖಿಸಿದ್ದೇನೆ ಆದರೆ ಇನ್ನು ಚಿಕ್ಕ ಪುಟ್ಟ ಅನೇಕ ವಸ್ತಗಳನ್ನು ನಾವು ಮರುಬಳಕೆ ಮಾಡಿ ಅದರಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಇಂದು ನಾವು ನೋಡುತ್ತಿರುವ ಬೆಲೆ ಏರಿಕೆಗೆ ಮೂಲ ಕಾರಣ ನಾವೆ ನಮ್ಮ ಬಳಕೆ ಹೆಚ್ಚಾದಂತೆ ಅದರ ಬೆಲೆ ಏರುವುದು ಸಹಜ ಹಾಗಾಗಿ ನಮಗೆ ಕೆಲವು ಸಾಮಾನ್ಯ ಅರಿವು ಇರಬೇಕಾದ ಅಗತ್ಯವಿದೆ ಎನಿಸುತ್ತದೆ. ಬನ್ನಿ ಸ್ನೇಹಿತರೆ ಹಾಗಾದರೆ ನಮ್ಮ ಸುತ್ತ ಮುತ್ತಲಿನ ಕೆಲವು ವಸ್ತಗಳಾದರು ಮರುಬಳಕೆ ಮಾಡಿ ಅವುಗಳನ್ನು ಪರಿಸರಕ್ಕೆ ಬಿಡದಂತೆ ಎಚ್ಚರ ವಹಿಸಿ ನಮ್ಮ ಪರಿಸರವನ್ನು ಕಾಪಾಡೋಣ. ಈ ಪರಿಸರ ಉಳಿಸುವಲ್ಲಿ ನಮ್ಮ ಚಿಕ್ಕ ಪಾತ್ರ ನಿಭಾಯಿಸೋಣಾ …..................