ಮೊಟ್ಟೆ : ಆಕಾರ ಚಿಕ್ಕದಾದರು ಇದರ ಕೆಲಸ ಮಾತ್ರ ತುಂಬಾ ದೊಡ್ಡದು ಮೊಟ್ಟೆಯ ಬಿಳಿಬಾಗ ವಾರಕ್ಕೆ ಮೂರುಬಾರಿ ತಿನ್ನುವುದರಿಂದ ಮನುಷ್ಯನು ಉತ್ತಮವಾದ ಆರೋಗ್ಯ ಹೊಂದುವನು ಎಂಬ ಮಾತು ಇತ್ತೀಚಿಗೆ ಒಂದು ಸಂಶೋಧನೆ ಸಾಭೀತು ಪಡಿಸಿದೆ. ಮೊಟ್ಟೆಯ ಹಳದಿ ಬಾಗದಲ್ಲಿ ಮಾತ್ರ ಕೊಲೆಸ್ಟ್ರಾಲ್ ಹೆಚ್ಚಿದ್ದು ಅದನ್ನು ಮಾತ್ರ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಅಷ್ಟೆ ಉಳಿದ ಮೊಟ್ಟೆ ದೇಹಕ್ಕೆ ಉತ್ತಮವಾದ ಶಕ್ತಿಯನ್ನು ಕೊಡುತ್ತದೆ.
ಬ್ರೊಕೋಲಿ (ಹಸಿರು ಹೂಕೋಸು): ಅತ್ಯದಿಕ ಪತ್ರಹರಿತ್ತು ಹೊಂದಿರುವ ಈ ಹೂಕೋಸು ಅನೇಕ ಔಷಧೀಯ ಗುಣಗಳ ಜೊತೆಗೆ ಮನುಷ್ಯನ ದೇಹದ ಅನೇಕ ಮಾರಕ ರೋಗಗಳಿಗೆ ರಾಮಬಾಣವಾಗಿದೆ. ಜೀವಕ್ಕೆ ಅಪಾಯಕಾರಿ ಎನಿಸುವ ಅದೆಷ್ಟು ಕಾಯಿಲೇಗಳನ್ನು ನೈಸರ್ಗಿಕವಾಗಿ ಗುಣಪಡಿಸುವ ಗುಣವನ್ನು ಈ ಹೂಕೋಸು ಹೊಂದಿದೆ. ಇದನ್ನು ಕೆಲವು ಸಾರಿನೊಂದಿಗೆ ಸೇವಿಸಿದರೆ ಹೃದಯ ಸಂಬಂದಿ ಖಾಯಿಲೆಗಳು ಹಾಗೂ ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಇದನ್ನು ಹಸಿಯಾಗಿ ಸೇವಿಸಬಾರದು ಜೊತೆಗೆ ಎಣ್ಣೆ ಪದಾರ್ಥದ ವಸ್ತುಗಳೊಂದಿಗೆ ಸೇವಿಸಬಾರದು.
ಒಣಫಲಗಳು: ರುಚಿ,ಹೇರಳವಾಗಿರುವ,ಬಾದಾಮಿ,ಶೇಂಗಾ,ಆಪ್ರಿಕೋಟ್,ಪಿಸ್ತಾ,ದಾಳಿಂಬೆ,ಗೇರುಬೀಜ,ಖರ್ಜೂರ,ಒಣ ಕುಂಬಳ ಬೀಜ, ಕೊಬ್ಬರಿ, ಒಣದ್ರಾಕ್ಷಿ, ಎಳ್ಳು, ಒಣ ಸೂರ್ಯಕಾಂತಿ ಬೀಜ, ಒಣನೆಲ್ಲಿಕಾಯಿ, ಅಕ್ರೋಟು, ಒಣ ಖರ್ಬೂಜ ಬೀಜಗಳು, ಇವು ಊಟದ ನಂತರ ಅಥವಾ ಎರಡು ಊಟದ ಮದ್ಯದ ಅವಧಿಯಲ್ಲಿ ಸೇವಿಸಿದರೆ ಉತ್ತಮವಾದ ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ. ವಿಶೇಷ ಸಂದರ್ಭದಲ್ಲಿ ಸಿಹಿ ಪಾದಾರ್ಥಗಳು ಸೇವಿಸುವಾಗ ಅಥವಾ ಸೇವಿಸಿದ ನಂತರ ಈ ಒಣ ಪದಾರ್ಥಗಳನ್ನು ಸೇವಿಸಿದರೆ ಉತ್ತಮವಾದ ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ.
ಹಾಲು: ನೈಸರ್ಗಿಕವಾದ ಹಾಲು ದೇಹಕ್ಕೆ ಆರೋಗ್ಯವನ್ನು ಕೊಡುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದು ಜೊತೆಗೆ ಅಷ್ಟೆ ಹೆಚ್ಚಾಗಿರುವ ಕೊಬ್ಬು ಆರೋಗ್ಯಕ್ಕೆ ಮಾರಕವು ಆಗಿದೆ. ದಿನನಿತ್ಯದ ಟಿ ಕಾಫಿಯನ್ನು ಹೊರತು ಪಡೆಸಿ ಊಟದ ನಂತರ ಹಾಲನ್ನು ಸೇವಿಸಬಹುದಾಗಿದೆ. ರಾತ್ರಿ ಊಟದ ನಂತರ ಮಲಗುವ ಮುನ್ನ ಹಾಲು ಕುಡಿಯುವ ರೂಢಿ ದೇಹದ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ.
ಟೋಪು (ಸೋಯಾ ಅವರೆಯ ಹಾಲಿನ ಗಿಣ್ಣು ) : ಸೋಯಾ ಅವರೆಯ ಹಾಲಿನಿಂದ ತಯಾರಾಗುವ ಟೋಪುವಿನಲ್ಲಿ ಹೇರಳವಾದ ಸ್ಯಾಚುರೇಟೆಡ್ ಕೊಬ್ಬು ಇರುವುದರಿಂದ ದೇಹಕ್ಕೆ ಉತ್ತಮವಾದ ಆಹಾರವಾಗಿದೆ. ಇದರಲ್ಲಿರುವ ಪಾಲಿ ಅನ್ ಸ್ಯಾಚುರೆಟೆಡ್ ಕೊಬ್ಬು ಹೆಚ್ಚಿನ ನಾರು ಹಾಗೂ ಉಪಯುಕ್ತ ವಿಟಮಿನ್ ಗಳು ಐಸೋಫ್ಲೋವೇನ್ ಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಒದಗಿಸುತ್ತವೆ. ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಇವು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಇವು ಸದ್ಯ ಮಾರ್ಕೇಟ್ ನಲ್ಲಿ ಸುಪರ್ ಸ್ಪೆಷಾಲಿಟಿ ರೂಪದಲ್ಲಿ ಸಿಗುತ್ತವೆ ಅದಕ್ಕಾಗಿ ಅವುಗಳನ್ನು ಸೇವನೆ ಮಾಡಬೇಕು.
ಓಟ್ ಧಾನ್ಯ : ಅವಲಕ್ಕಿ ಪುಡಿಯಂತಿರುವ ಓಟ್ ಧಾನ್ಯ ಹೃದಯ ಸಂಬಂದಿ ಕಾಯಿಲೆಗಳನ್ನು ತಡೆಗಟ್ಟುವ ಉತ್ತಮ ಆಹಾರವಾಗಿದೆ. ಸಿಹಿ ಪದಾರ್ಥ ಸೇವಿಸಿದೆ ಓಟ್ ಧಾನ್ಯವನ್ನು ಸೇವಿಸುವುದರಿಂದ ಮಧುಮೇಹವನ್ನು ತಡೆಗಟ್ಟಬಹುದು. ಓಟ್ ನಲ್ಲಿರುವ ಹೆಚ್ಚಿನ ಪ್ರಮಾಣದ ನಾರಿನಾಂಶವು ಶರೀರದ ಜೀರ್ಣಕ್ರೀಯೆ ಉತ್ತಮಗೊಳಿಸುತ್ತದೆ.
ಉತ್ತಮ ಆರೋಗ್ಯಕ್ಕೆ ಹೀಗೆ ಮಾಡಿ
ಪ್ರತಿದಿನ ಉತ್ತಮವಾದ ವ್ಯಾಯಾಮ ಮಾಡಿ, ಪ್ರತಿದಿನ ಬೆಳೆಗ್ಗೆ ತುಳುಸಿ ಎಲೆಗಳನ್ನು ತಿನ್ನರಿ , ಅತ್ಯಂತ ಖಾರ ಹಾಗೂ ಹುಳಿಯಾದ ಆಹಾರವನ್ನು ಸೇವಿಸಬೇಡಿ, ಸಿಗರೇಟು ಸೇವನೆ, ಆಲ್ಕೊಹಾಲ್ ಸೇವನೆ, ಮಾದಕ ದ್ರವ್ಯ ಸೇವನೆ ಮುಂತಾದವುಗಳಿಂದ ದೂರವಿರಿ, ಪ್ರತಿದಿನ ಎರಡು ಲೀಟರಿನಷ್ಟು ನೀರು ಕುಡಿಯಿರಿ, ಆದಷ್ಟು ಕುದಿಸಿ ಆರಿಸಿದ ನೀರು ಕುಡಿಯಲು ಪ್ರಯತ್ನಪಡಿ, ಯಾವುದಾದರು ಅಂಗಡಿಯ ಔಷಧ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ, ಆದಷ್ಟು ಹಾಲು ತುಪ್ಪಾ ಮೊಸರು ಊಟ ಮಾಡಿ,
ಆರೋಗ್ಯವೆ ಭಾಗ್ಯ ಎಂಬುವುದು ಎಲ್ಲರಿಗೆ ಗೊತ್ತು ಅದಕ್ಕಾಗಿ ಈ ಭಾಗ್ಯವನ್ನು ಕಾಪಾಡಿಕೊಳ್ಳುವ ಕೆಲಸ ನಮಗೆ ಬಿಟ್ಟಿದ್ದು ಜೀವನದಲ್ಲಿ ಆರೋಗ್ಯ ಕಳಿದುಕೊಂಡರೆ ಮತ್ತೆ ಸಿಗುವುದಿಲ್ಲಾ ಹಣ ಕಳಿದುಕೊಂಡರೆ ಮತ್ತೆ ಗಳಿಸಿದಬಹುದಾದಗಿದೆ ಆದರೆ ನಮ್ಮ ಆರೋಗ್ಯ ಕಳಿದುಕೊಂಡರೆ ಅದನ್ನು ಮತ್ತೆ ಪಡೆಯುವುದು ಸುಲಭದ ಮಾತಲ್ಲಾ ಅದಕ್ಕಾಗಿ ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ ಇರುವಂತೆ ಉತ್ತಮವಾದ ಆರೋಗ್ಯಯುತ ಪದಾರ್ಥಗಳ ಸೇವನೆಯಿಂದ ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳಿ .