ಪರೀಕ್ಷಾ ಭಯ.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಸಂಪೂರ್ಣ ಅಂಕಗಳ ಮೇಲೆಯೇ ನಿಂತಿದೆ. ನಾವು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಲವಾರು ಪರೀಕ್ಷೆಗಳನ್ನು ಪೊಯಿಂಟ್ ಗಳಲ್ಲಿ ಫೇಲ್ ಆಗಿರುವ ನೌಕರಿ ಕಳೆದುಕೊಂಡಿರುವ ಅನೇಕ ಉದಾಹರಣೆಗಳು ಕಣ್ಣ ಮುಂದಿವೆ. ಈ ಸ್ಪರ್ಧೆಗಳು ನಮಗೆ ನಮ್ಮ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಗಳಿಸಲು ಮತ್ತು ಉತ್ತಮ ವ್ಯಕ್ತಿತ್ವ ಗಳಿಸಿಕೊಳ್ಳಲು ಸಹಾಯಕವೇ ಎಂಬುವುದು ಮಾತ್ರ ಬಳಕೆಯ ಆಧಾರದ ಮೇಲೆ ನಿಂತಿದೆ. ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕ ಪಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅದಕ್ಕಾಗಿ ದಾರಿಗಳು ನೂರಾರು ಇದ್ದು ಅವುಗಳಲ್ಲಿ ನಾವು ಆರಿಸಿಕೊಳ್ಳುವ ದಾರಿ ಎಂತಹದ್ದು ಎಂಬ ವಿಷಯ ಅಷ್ಟೆ ಮುಖ್ಯವಾಗುತ್ತದೆ.
ಹೀಗೆ ಮಾಡಬೇಕಾದರೆ ನಮಗೆ ಓದುವ ಕಲೆ ಮತ್ತು ಓದಿದನ್ನು ಬರೆಯುವ ತೋರ್ಪಡಿಸುವ ಕಲೆ ಕರಗತವಿದ್ದರೆ ಮಾತ್ರ ಕೊನೆಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಗಳಿಸಲು ಸಾಧ್ಯವಾಗುತ್ತದೆ. ಪರೀಕ್ಷೆಯ ಸಿದ್ಧತೆಯು ಸರಿಯಾಗಿದ್ದರೆ ನಾವು ಧೈರ್ಯದಿಂದ ಈ ಪರೀಕ್ಷೆಗಳನ್ನು ಎದುರಿಸಿದರೆ ಕೊನೆಯ ಘಳಿಗೆಯಲ್ಲಿ ಓದಿ ಪರೀಕ್ಷಾ ಭಯ ಹುಟ್ಟಿಸಿಕೊಳ್ಳುವ ತಾಪತ್ರಯ ತಪ್ಪುತ್ತದೆ. ಪರೀಕ್ಷೆಯ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮವಿರುವುದಿಲ್ಲ.
ಕಾರ್ಯ ಮಾಡಬೇಕು ಎಂಬ ಕಲ್ಪನೆಯು ಅರ್ಧ ಕೆಲಸ ಮುಗಿದಂತೆ.
1. ಓದು ಯಾವಾಗಲು ಜಾಣತನದಿಂದ ಕೂಡಿರಬೇಕು, ಆದಷ್ಟು ಬೇಗ ಕಾರ್ಯಪ್ರವೃತ್ತರಾಗಬೇಕು.
2. ಇಂದು ಪ್ರಾರಂಭ ಮಾಡಿರುವ ಓದು ಅರ್ಧಕ್ಕೆ ನಿಲ್ಲದಂತೆ ಗಮನವಹಿಸಬೇಕು.
3. ಗುರಿಮುಟ್ಟುವತನಕ ಓದು ಸತತವಾಗಿರಬೇಕು.
4. ಓದಿಗಾಗಿಯೇ ವೇಳಾಪಟ್ಟಿ ಮಾಡಿಕೊಳ್ಳಿ ವೇಳಾಪಟ್ಟಿಯಂತೆ ಪಾಲಿಸಲು ಸತತ ಪ್ರಯತ್ನಪಡಿ.
5. ಯೋಜನಾಬದ್ಧವಾದ ಅಧ್ಯಯನ ಅಭ್ಯಾಸವನ್ನು ಸರಳೀಕರಿಸುತ್ತದೆ.
6. ಅಭ್ಯಾಸದಲ್ಲಿ ಪುನರಾವರ್ತನೆಗೆ ಅವಕಾಶ ಮಾಡಿಕೊಡಿ, ಪುನರಾವರ್ತನೆಯಿಂದ ಅಭ್ಯಾಸ ಘಟ್ಟಿಕೆಗೊಳ್ಳುತ್ತದೆ.
7. ಇಂದು ಮಾಡದೇಯಿರುವ ಒಂದು ಸಣ್ಣ ಕೆಲಸ ಮುಂದಿನ ದೊಡ್ಡ ಕೆಲಸಕ್ಕೆ ಕೊಡಲಿಪೆಟ್ಟು ಚಿಕ್ಕ ಚಿಕ್ಕ ಭಾಗಗಳನ್ನು ಆ ದಿನದ ಅಧ್ಯಯನದ ಕೊನೆಗೆ ಮುಗಿಸಿದರೆ ಸೂಕ್ತವಾಗುತ್ತದೆ. ಇಲ್ಲವಾದಲ್ಲಿ ಕೊನೆಯ ಘಳಿಗೆಯಲ್ಲಿ ಯಾವುದು ಓದಲು ಆಗುವುದಿಲ್ಲ ಎಲ್ಲವೂ ಗೊಂದಲಮಯವಾಗುತ್ತದೆ.
8. ಜೀವನದಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಂಡು ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ ಅದರತ್ತ ಓದುವ ಹವ್ಯಾಸ ಬೆಳೆಸಿಕೊಳ್ಳಿ ತಕ್ಕ ಪರಿಶ್ರಮ ಪಡಿ.
9. ಕಠಿಣ ಪರಿಶ್ರಮ ಪಡುವುದ್ದಕ್ಕಿಂತ ಪುಸ್ತಕಗಳನ್ನು ಪ್ರೀತಿಸುವುದು ಸೂಕ್ತ ಪ್ರೀತಿಯಿಂದ ಪುಸ್ತಕದೊಳಗಿನ ಜ್ಞಾನ ಪಡೆಯಲು ಸಹಕಾರಿಯಾಗುತ್ತದೆ.
10. ನೀವು ಸದಾ ಶಾಂತರಾಗಿರಲು ಹೊಸ ಯೋಚನೆಗಳನ್ನು ಮಾಡಲು ಕೆಲವು ಸಾಮಾನ್ಯವಾದ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ. ಉದಾ: ದೀರ್ಘವಾದ ಉಸಿರಾಟ, ಯೋಗ, ಧ್ಯಾನ,
11. ಯಾರನ್ನು ದ್ವೇಷಿಸಬೇಡಿ ಎಲ್ಲರನ್ನು ಪ್ರೀತಿಸಿ ಒಳ್ಳೆಯ ದೃಷ್ಠಿಯಿಂದ ಕಂಡು ನಿಮ್ಮ ಮನಸ್ಸು ಹಗುರವಾಗಿರುವಂತೆ ನೋಡಿಕೊಳ್ಳಿ.
12. ಪುಸ್ತಕಗಳನ್ನು ಭಾರ ಎಂದು ಭಾವಿಸಬೇಡಿ, ಪುಸ್ತಕಗಳು ನಮ್ಮ ಬದುಕು ಬದಲಿಸುವ ಅಸ್ತ್ರಗಳು.
13. ಸಮಯ ಯಾವಾಗಲು ನಮ್ಮನ್ನಿ ಕಾಯುವುದಿಲ್ಲ, ನಾವು ಒಳ್ಳೆಯ ಸಮಯಕ್ಕಾಗಿ ಕಾಯಬೇಕು.
14. ಸಿಕ್ಕಿರುವ ಅಲ್ಪ ಸಮಯವನ್ನು ಹಾಳುಮಾಡದೇ ಕಾಪಾಡಿಕೊಂಡು ಸಮಯಕ್ಕೆ ಬೆಲೆಕೊಟ್ಟು ಸಮಯದ ಸದುಪಯೋಗಪಡೆಸಿಕೊಳ್ಳಿ.
15. ನಿಮಗೆ ಸಾಧ್ಯವಾದರೆ ಓದಲು ಒಂದು ಪ್ರತ್ಯೇಕ ಕೋಣೆಯ ನಿರ್ಮಾಣ ಮಾಡಿಕೊಳ್ಳಿ ನಿಮ್ಮ ಎಲ್ಲಾ ಪುಸ್ತಕಗಳು ಅಲ್ಲಿಯೇ ಇದ್ದು ಸಮಯಕ್ಕೆ ಸರಿಯಾಗಿ ಕೈಗೆ ಸಿಗುವಂತೆ ನೋಡಿಕೊಳ್ಳಿ.
16. ಓದಿ ಸಾಧನೆ ಮಾಡಿರುವ ಸಾಧಕರ ಬಗ್ಗೆ ತಿಳಿದುಕೊಳ್ಳಿ ಸಾಧ್ಯವಾದರೆ ಅವರ ಚಿತ್ರಪಟಗಳು ಜೊತೆಗಿದ್ದರೆ ಒಳ್ಳೆಯದು. ಅವರು ಜೀವನದಲ್ಲಿ ಸಾಗಿಬಂದ ರೀತಿಯನ್ನು ಅನುಸರಿಸಲು ಪ್ರಯತ್ನಪಡಿ.
17. ಆರೋಗ್ಯ ಈ ಸಮಯದಲ್ಲಿ ಬಹಳ ಮುಖ್ಯ ನಿಮ್ಮ ಆರೋಗ್ಯದ ಕಡೆಗೆ ಗಮನಕೊಡಿ.
ಪರಿಣಾಮಕಾರಿಯಾಗಿ ಓದುವುದು ಒಂದು ಕಲೆ.
ಸಾಮಾನ್ಯವಾಗಿ ಓದುವುದರಲ್ಲಿ ಬಹಳ ಪ್ರಕಾರವಾಗಿವೆ. ನಾವು ಕಾಣುವ ಅನೇಕ ಓದುಗಳಲ್ಲಿ ಪರಿಣಾಮಕಾರಿಯಾಗಿ ಓದುವರು ಮತ್ತು ಅದನ್ನು ಅಭ್ಯಾಸವಾಗಿ ಮಾಡಿಕೊಳ್ಳುವರು ಎಷ್ಟು ಜನವೆಂದು ಹುಡುಕಿದರೆ ಸಿಗುವುದು ಬೆರಣಿಕೆಯಷ್ಟು ಮಾತ್ರ. ಓದು ಎನ್ನುವುದನ್ನು ಭಾರವಾಗಿಸಿಕೊಂಡು ಓದುವುದು ಮರೆತು ಹಾಳಾಗುವ ಪ್ರಕರಣಗಳೇ ಹೆಚ್ಚು ಇಂತಹ ಸಮಯದಲ್ಲಿ ಪರಿಣಾಮಕಾರಿ ಓದಿಗಾಗಿ ನಾವೆಲ್ಲ ಮಾಡಬೇಕಾದ ಪ್ರಮುಖ ಕೆಲಸವೆಂದರೆ ನಮ್ಮಲ್ಲಿ ಪರಿಣಾಮಕಾರಿಯಾಗಿ ಆಲಿಸುವ ಕೌಶಲ್ಯ ಬಹಳ ಮುಖ್ಯವಾಗುತ್ತದೆ.
ನಾವು ಪರಿಣಾಮಕಾರಿಯಾಗಿ ಆಲಿಸುವುದು ಹೇಗೆ?
1. ಮೊದಲು ಮಾಹಿತಿ ಮತ್ತು ಜ್ಞಾನ ನಿಮ್ಮ ತರಗತಿಯಲ್ಲಿ ಶಿಕ್ಷಕರು ನಿಮಗೆ ಕೊಡುತ್ತಾರೊ ಅದನ್ನು ಸರಿಯಾಗಿ ಆಲಿಸಿ.
2. ಆಲಿಸುವ ಮೂಲವಿರುವುದು ಮುಖ್ಯವಾಗಿ ತರಗತಿಯಲ್ಲಿ ಉತ್ತಮ ಜ್ಞಾನಕ್ಕಾಗಿ ಚೆನ್ನಾಗಿ ಆಲಿಸಿರಿ.
3. ತರಗತಯಲ್ಲಿ ಎಲ್ಲಾ ವಿಷಯಗಳನ್ನು ಪರಿಣಾಮಕಾರಿಯಾಗಿ ಆಲಿಸಬೇಕು.
4. ಕ್ರಿಯಾತ್ಮಕ ಹಾಗೂ ಏಕಾಗ್ರತೆಯಿಂದ ಆಲಿಸುವಿಕೆಯಿಂದ 50% ಓದು ಮುಗಿದಂತೆ ತೋರುತ್ತದೆ.
5. ಮಾತುಗಾರಿಕೆ ಹಾಗೂ ಬರವಣಿಗೆಗಿಂತ ಮೊದಲ ಆದ್ಯತೆ ಆಲಿಸುವಿಕೆಗೆ ಕೊಡಬೇಕು.
6. ಶಿಕ್ಷಕರು ಪಾಠ ಮಾಡುವಾಗ ಮಾಹಿತಿ ನೀಡುವಾಗ ಸಮಸ್ಯೆ ಎದುರಾದರೆ ಅದನ್ನು ಬರೆದುಕೊಳ್ಳಿ ತರಗತಿಯ ನಂತರ ಶಿಕ್ಷಕರ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ.
7. ಪರಿಣಾಮಕಾರಿ ಆಲಿಸುವಿಕೆಯಿಂದ ವಿಷಯ ಗೃಹಿಕೆ ಅವಶ್ಯಕ ಒಂದು ವೇಳೆ ಉತ್ತಮವಾಗಿ ಆಲಿಸದಿದ್ದರೆ ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ.
8. ಪರಿಣಾಮಕಾರಿಯಾಗಿ ಆಲಿಸುವಿಕೆಯಿಂದ ವಿಷಯ ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ವಿಷಯ ಅರ್ಥಮಾಡಿಕೊಂಡು ಓದಿದರೆ ಓದು ಮಜಕೊಡುತ್ತದೆ. ಅರ್ಥೈಸಿಕೊಂಡು ಓದಲು ಪ್ರಯತ್ನಪಡಿ.
ಉತ್ತಮವಾಗಿ ಓದುವುದು ಹೇಗೆ?
1. ನಿಧಾನವಾಗಿ ಅರ್ಥಮಾಡಿಕೊಂಡು ಓದುವುದು.
2. ವೇಗವಾಗಿ ಓದುವುದರಿಂದ ಅರ್ಥ ಕೆಡಬಹುದು ಕಲಿಕೆಗೆ ತೊಂದರೆಯಾಗಬಹುದು.
3. ನೀವು ಅರ್ಥಮಾಡಿಕೊಳ್ಳುವಷ್ಟು ವೇಗವಾಗಿ ಓದಿದರೆ ಸಾಕು.
4. ನಿಯಮಿತವಾಗಿ ಓದುವಿಕೆ ಹಂತ ಹಂತವಾಗಿ ಸತತ ಪರಿಶ್ರಮದಿಂದ ತಿಳಿಯುತ್ತದೆ.
5. ನಿಮ್ಮ ಒಂದು ಉತ್ತಮ ಗುರಿ ಓದುವಿಕೆಗೆ ಪ್ರೋತ್ಸಾಹ ಕೊಡುತ್ತದೆ.
6. ನಿಮ್ಮ ಶಾಲಾ ವಾರ್ಷಿಕ ವೇಳೆಯಲ್ಲಿ ಕೆಲವು ನಿಯತಕಾಲಿಕೆಗಳು, ಒಳ್ಳೆಯ ಪತ್ರಿಕೆಗಳು ಓದಬೇಕು
7. ಇದರಿಂದ ಶಬ್ದ ಸಂಗ್ರಹ ಹೆಚ್ಚಾಗುತ್ತದೆ.
8. ಹೇಗೆ ಓದುತ್ತಿದ್ದೀರಿ ಎಂಬುವುದ್ದಕ್ಕಿಂತ ಎಷ್ಟು ಅರ್ಥಮಾಡಿಕೊಂಡು ಓದಿದ್ದೀರಿ ಎಂಬುವುದು ಮಹಳ ಮುಖ್ಯ ಉತ್ತಮವಾದ ಪರಿಣಾಮಕಾರಿ ಓದು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ.
ನಾವು ಏಕೆ ಮರೆಯುತ್ತೇವೆ?
ಅಯ್ಯೊ ಅವನಿಗೆ ಮರೆವು ಹೆಚ್ಚು ಏನು ಹೇಳಿದರು ನೆನಪಿನಲ್ಲಿರುವುದಿಲ್ಲ, ಎಂಬ ವಿಷಯ ಕೇಳಿರಬಹುದು ನಾವು ಕಂಡದ್ದು ಕೇಳಿದ್ದು ಮರೆಯಲು ಮುಖ್ಯವಾಗಿ ಮೂರು ಕಾರಣಗಳು ಅವು ಈ ಕೆಳಗಿನಂತಿವೆ. ನಾವು ಕಲಿಯುತ್ತಿರುವ ವಿಷಯದಲ್ಲಿ ನೈಜವಾದ ಆಸಕ್ತಿ ಇಲ್ಲದಿದ್ದಾಗ ಮಾತ್ರ. ನಾವು ಕಲಿಯುತ್ತಿರುವ ಅಥವಾ ಓದುತ್ತಿರುವ ವಿಷಯ ಅರ್ಥವಾಗದಿದ್ದಾಗ ಮಾತ್ರ. ನಾವು ಕಲಿತ ವಿಷಯ ಮನಸ್ಸಿನಲ್ಲಿ ಮೊದುಳಿನಲ್ಲಿ ಉಳಿಯದಿದ್ದರೆ ಕಲಿತ ವಿಷಯ ಉಪಯೋಗಕ್ಕೆ ಬಾರದೇಯಿದ್ದರೆ ಮರೆಯುತ್ತೇವೆ. ನೆನಪಿರಲಿ ನಾವು ಮರೆತಷ್ಟು ಹೆಚ್ಚಿಗೆ ಕಲಿಯುತ್ತೇವೆ ಹಾಗಾಂತ ಎಲ್ಲವೂ ಮರೆಯುತ್ತ ಹೋಗಬೇಡಿ.
ಕೆ.ಎಂ.ವಿಶ್ವನಾಥ ಮರತೂರ.
ಲೇಖಕರು.