ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತ ಮಿಗಿಲಾದವು. ತಾಯಿ ನಾಡಿನ ತಾಯಿ ನುಡಿಯನ್ನು ಕಲಿಯುವ ಮಕ್ಕಳಲ್ಲಿ ಅದರ ಸುಗಂಧ ತಿಳಿಸಬೇಕಾದ ಅಗತ್ಯವಿದೆ. ಪ್ರಸ್ತುತ ದಿನಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ತಾಯಿ ನುಡಿಯಿಂದ ಕನ್ನಡ ಭಾಷೆಯನ್ನು ಕಲಿಸಬೇಕಾದರೆ ಬಹಳ ಬಿಕ್ಕಟ್ಟುಗಳು ಎದುರಾಗುತ್ತಿವೆ. ಮಕ್ಕಳು ಕನ್ನಡ ಕಲಿಯುವಲ್ಲಿ ತೊಂದರೆಗಳು ಎದುರಿಸಿದರೆ ಮುಂದಿನ ವಿಷಯಗಳನ್ನು ತಿಳಿಯುವಲ್ಲಿ ಅತ್ಯಂತ ಹೆಚ್ಚು ತೊಂದರೆಗಳನ್ನು ಎದುರಿಸುತ್ತಾರೆ. ಕನ್ನಡವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಉಳಿದ ವಿಷಯಗಳು ತಾನಾಗಿಯೇ ಅರ್ಥವಾಗುತ್ತವೆ ಎಂಬ ಅಂಶಗಳನ್ನು ಅದೆಷ್ಟೊ ಸಂಶೋಧನೆಗಳು ತೋರಿಸಿಕೊಟ್ಟಿವೆ. ಹಲವು ಸಂಶೋಧನೆಗಳು, ಹಲವು ತಜ್ಞರ ಅಭಿಪ್ರಾಯದಂತೆ ಕನ್ನಡ ಕಲಿಕೆ ಎಷ್ಟೆ ಸುಗಮಗೊಳಿಸಿದರೂ ಇನ್ನು ಅನೇಕ ರೀತಿಯ ಬಿಕ್ಕಟ್ಟುಗಳು ನಮ್ಮ ಮಕ್ಕಳು ಎದುರಿಸುತ್ತಿದ್ದಾರೆ.
ಕನ್ನಡ ಭಾಷಾ ಕಲಿಕೆ ಅಂದು ಇಂದು:
ಕನ್ನಡ ನಮ್ಮ ಮಾತೃ ಭಾಷೆಯಾಗಿದೆ. ಅದನ್ನು ಅರ್ಥಮಾಡಿಕೊಳ್ಳುವ ಕೌಶಲ್ಯ ನಮಗೆ ಹೆಚ್ಚಿದೆ ಎಂದು ನಾವೆಲ್ಲ ಯೋಚಿಸುತ್ತೇವೆ ಮತ್ತು ಕಲಿಯಲು ಅಣಿಯಾಗುತ್ತೇವೆ. ಕನ್ನಡ ಅತ್ಯಂತ ಸರಳ ಎಂದು ಅನೇಕರು ಭಾವಿಸಿರುತ್ತಾರೆ. ಈ ಕನ್ನಡ ಕಲಿಕೆಯೆಂಬುವುದು ಬೆಳೆದುಬಂದ ಹಾದಿಯೆನ್ನೊಮ್ಮೆ ಗಮನಿಸಿದರೆ ನಿಜಕ್ಕೂ ಅದರ ವ್ಯಾಪ್ತಿ ಅರ್ಥವಾಗುತ್ತದೆ. ನಾವೆಲ್ಲ ಸೈದ್ಧಾಂತಿಕವಾಗಿ ಕನ್ನಡದ ಬಗ್ಗೆ ಮಾತನಾಡಬಹುದಾಗಿದೆ ಆದರೆ ಚಿಕ್ಕ ಮಕ್ಕಳಿಗೆ ಕನ್ನಡ ಕಲಿಸಿ ಎಂದು ಹೇಳಿದರೆ ನಿಜಕ್ಕೂ ನಮ್ಮ ಕೈಯಿಂದ ನೀಗಲಾರದ ಕೆಲಸವಾಗಿದೆ. ಅನಾದಿಕಾಲದಿಂದಲೂ ಕನ್ನಡಕ್ಕೆ ತನ್ನದೇ ಆದ ಛಾಪುಯಿದೆ ಒಂದು ವಿಶಿಷ್ಠವಾದ ಹಾದಿಯಿದೆ ಈ ಹಾದಿಯಲ್ಲಿ ಕನ್ನಡ ಭಾಷೆ ಸಾಗಿ ಬಂದಿದೆ. ಭಾಷಾ ಕಲಿಕೆಯ ಒಂದು ಒಳನೋಟ ಬೀರಿದಾಗ ನಮಗೆ ಅದರ ಒಳಹರವು ಅರ್ಥವಾಗುತ್ತದೆ. ಈ ಅಧ್ಯಾಯ ಅದನ್ನು ಪೂರೈಸುತ್ತದೆ.
ಪ್ರಾಥಮಿಕ ಶಾಲಾ ಹಂತದಲ್ಲಿ ಕನ್ನಡ ಕಲಿಕೆಯ ಬಿಕ್ಕಟ್ಟುಗಳು:
1. ಪ್ರಾಥಮಿಕ ಹಂತದಲ್ಲಿ ಮಕ್ಕಳು ಕನ್ನಡ ಕಲಿಯುವ ಸುಲಭದ ದಾರಿಯಿದ್ದು ಅದನ್ನು ಅನುಷ್ಠಾನಗೊಳಿಸುವ ಹಂತದಲ್ಲಿ ತೊಂದರೆಯಿದ್ದು ಮಕ್ಕಳು ಕಲಿಯಲಾಗುತ್ತಿಲ್ಲ.
2. ಸರಕಾರದ ಯೋಜನೆಯೆಂತೆ ಫಲಶೃತಿಯಾದರೆ ಕನ್ನಡ ಸರಾಗವಾಗಿ ಮಕ್ಕಳು ಕಲಿಯಬಹುದಾಗಿದೆ ಆದರೆ ಅತಿಯಾದ ಮಕ್ಕಳ ಸಂಖ್ಯೆ ಇದಕ್ಕೆ ಮಾರಕವಾಗಿ ಪರಿಣಮಿಸಿದೆ.
3. ಶಿಕ್ಷಕರಿಗೆ ತರಬೇತಿಗಳು ತುಂಬಾ ಇದ್ದು ನಿಜವಾದ ಕನ್ನಡ ಕಲಿಕೆಯ ರೀತಿ ನೀತಿಗಳ ಕಡೆಗೆ ಗಮನಕೊಡದಿರುವುದು ಬಿಕ್ಕಟ್ಟಾಗಿ ಪರಿಣಮಿಸಿದೆ.
4. ಕನ್ನಡ ಕಲಿಸುವ ಶಿಕ್ಷಕನಿಗೆ ಕಲಿಕೆ ನಿರಂತರವಾದದ್ದು ಎಂಬ ಸತ್ಯ ದೂರವಾಗಿ ನಿಂತಿದೆ.
5. ಮಕ್ಕಳಿಗೆ ಸುತ್ತಲಿನ ಪರಿಸರ, ಕೌಟುಂಬಿಕ ಸ್ಥಿತಿಗತಿ, ಸತತ ಗೈರುಹಾಜರಿ, ಬೇರೆ ಭಾಷೆಯ ಪ್ರಭಾವ, ಅತಿಯಾದ ಇಂಗ್ಲೀಷ್ ವ್ಯಾಮೋಹ ಇವೆಲ್ಲವೂ ಒಂದಾಗಿ ಪ್ರಾಥಮಿಕ ಹಂತದ ಮಕ್ಕಳು ಮತ್ತು ಕನ್ನಡ ಕಲಿಕೆಯಲ್ಲಿ ತೊಂದರೆಯಾಗುತ್ತಿದೆ.
6. ಶಾಲಾ ವಾತಾವರಣದಲ್ಲಿ ಆಡು ಭಾಷೆ ಹಾಗೂ ಪುಸ್ತಕೀಯ ಭಾಷೆಗಳು ತಳುಕು ಹಾಕಿಕೊಂಡು ಭಾಷೆ ಕಲಿಸುವ ಹಾಗೂ ಕಲಿಯುವವ ಇಕ್ಕಟ್ಟಿನೊಳಗೆ ಸಿಲುಕಿದ್ದಾರೆ.
7. ಗಡಿ ಪ್ರದೇಶದಲ್ಲಿ ಪಕ್ಕದ ರಾಜ್ಯಗಳ ಭಾಷೆ ತುಂಬಾ ಪರಿಣಾಮ ಬೀರುತ್ತಿದೆ.
8. ಸಧ್ಯ ಮಕ್ಕಳೆಲ್ಲರೂ ಸ್ಪರ್ಧಾತ್ಮಕವಾಗಿ ಯೋಚಿಸುತ್ತಿರುವುದರಿಂದ ಯೋಚಿಸುವ ಭಾಷೆಯೂ ಕೂಡ ಕನ್ನಡ ಅಲ್ಲಾ ಎಂಬ ಕೂಗು ಕೇಳಿಬರುತ್ತಿದೆ.
9. ಬೆಳೆದು ನಿಂತಿರುವ ಇಂಗ್ಲೀಷ್ ಶಾಲೆಗಳು, ಕುಟುಂಬದ ಸದಸ್ಯರೆಲ್ಲರೂ ಖಾಸಗಿ ಶಾಲೆಗಳ ಕಡೆಗೆ, ಇಂಗ್ಲೀಷ್ ಶಾಲೆಗಳ ಕಡೆಗೆ ಮುಖ ಮಾಡಿರುವ ಕಾರಣ ಕನ್ನಡ ತನ್ನ ಕಲಿಕೆಯನ್ನು ಮಟುಕುಗೊಳಿಸುತ್ತಿದೆ.
10. ಪ್ರಾಥಮಿಕ ಹಂತದ ಮಕ್ಕಳಲ್ಲಿ ಕನ್ನಡ ಕಲಿಕೆಯ ಬಿಕ್ಕಟ್ಟುಗಳನ್ನು ಅಧ್ಯಯನ ಮಾಡಬೇಕಾದರೆ ಈ ಕೆಳಗಿನ ಅಧ್ಯಾಯಗಳ ಶಿಸ್ತಿನ ಅಧ್ಯಯನ ಅತೀ ಅವಶ್ಯಕವಾಗಿದೆ.
ಕನ್ನಡ ಭಾಷಾ ಕಲಿಕೆ ಒಂದು ನೋಟ.
1. ಕನ್ನಡ ಭಾಷಾ ಕಲಿಕೆ ಅಂದು ಇಂದು.
2. ಕನ್ನಡ ಕಲಿಯಯವ ವಾತಾವರಣ.
3. ಕನ್ನಡ ಭಾಷಾ ಬೆಳವಣಿಗೆ ಮತ್ತು ವಿಕಾಸ.
4. ಭಾಷೆಯ ಪರಿಕಲ್ಪನೆ ಮತ್ತು ಕಲಿಕೆ.
ಪೂರ್ವ ಮತ್ತು ಪ್ರಾಥಮಿಕ ಶಾಲಾ ಕನ್ನಡ ಪಠ್ಯ.
1. ಪೂರ್ವ ಪ್ರಾಥಮಿಕದಲ್ಲಿ ಚಿಲಿಪಿಲಿ.
2. ಪ್ರಾಥಮಿಕದಲ್ಲಿ ನಲಿಕಲಿ.
3. ಪ್ರಸ್ತುತದಲ್ಲಿ ಕನ್ನಡ ಕಲಿಯುತ್ತಿರುವ ಬಗೆ.
4. ಪ್ರಾಥಮಿಕ ಹಂತದ ಮಕ್ಕಳಲ್ಲಿ ಭಾಷಾ ಕಲಿಕೆ.
ಪ್ರಾಥಮಿಕ ಶಾಲಾ ಹಂತದಲ್ಲಿ ಕನ್ನಡ ಕಲಿಕೆಯ ಬಿಕ್ಕಟ್ಟುಗಳು.
1. ಭಾಷಾ ಪ್ರಭಾವ.
2. ಕೌಟುಂಬಿಕ ಪ್ರಭಾವ.
3. ಪರಿಸರದ ಪ್ರಭಾವ.
ಪ್ರಾಥಮಿಕ ಶಾಲಾ ಹಂತದಲ್ಲಿ ಕನ್ನಡ ಕಲಿಕೆಯನ್ನು ಖಾತ್ರಿಗೊಳಿಸುವಲ್ಲಿ
1. ಶಿಕ್ಷಕರು ಪಾತ್ರ
2. ಮಕ್ಕಳ ಪಾತ್ರ
3. ಗೈರು ಹಾಜರಿ ಮತ್ತು ಹಾಜರಾತಿ.
4. ಸಮುದಾಯದ ಪಾತ್ರ.
5. ಇಲಾಖೆಗಳ ಸಹಭಾಗಿತ್ವ.
ಭಾಷೆಯ ಪರಿಕಲ್ಪನೆ ಹೆಚ್ಚಿಸಿ ಕಲಿಕೆ ಸಂಪೂರ್ಣಗೊಳಿಸುವಿಕೆ.
1. ಮಕ್ಕಳಲ್ಲಿ ಶಿಕ್ಷಕರು ಆಲಿಸುವ ಕೌಶಲ್ಯದ ಚಟುವಟಿಕೆಗಳು.
2. ಮಾತನಾಡುವಿಕೆ. ಮಕ್ಕಳಲ್ಲಿ ಶಿಕ್ಷಕರು ಮಾತನಾಡುವ ಕೌಶಲ್ಯದ ಚಟುವಟಿಕೆಗಳು.
3. ಮಕ್ಕಳಲ್ಲಿ ಶಿಕ್ಷಕರು ಓದಿನ ಕೌಶಲ್ಯದ ಚಟುವಟಿಕೆಗಳು.
4. ಮಕ್ಕಳಲ್ಲಿ ಶಿಕ್ಷಕರು ಬರವಣಿಗೆ ಕೌಶಲ್ಯದ ಚಟುವಟಿಕೆಗಳು
ಆಡು ಭಾಷೆ
1. ಕನ್ನಡ ಕಲಿಕೆಗೆ ಆಡುಭಾಷೆಯ ಮಹತ್ವ
2. ಆಡು ಭಾಷೆಯಿಂದ ಭಾಷೆಯ ಬೆಳವಣಿಗೆ
3. ಆಡುತ್ತ ಕಲಿಯುವ ಭಾಷೆ
ಪುಸ್ತಕೀಯ ಭಾಷೆ
1. ಪುಸ್ತಕೀಯ ಭಾಷೆಯ ಪರಿಕಲ್ಪನೆ
2. ಪುಸ್ತಕೀಯ ಭಾಷೆಯ ಅಧ್ಯಯನ
3. ಪುಸ್ತಕೀಯ ಭಾಷೆಯಿಂದ ಆಡು ಭಾಷೆಯೆಡೆಗೆ
4. ಮಕ್ಕಳಿಗೆ ಯಾವುದು ಮೊದಲು.
5. ಪುಸ್ತಕದ ಭಾಷೆಯ ಕಲಿಕೆ ಮತ್ತು ಬೆಳವಣಿಗೆ.
ಮಾಡುವ ವಿಧಾನ: ಕ್ಷೇತ್ರ ಭೇಟಿ, ಮಾಹಿತಿ ಕಲೆಹಾಕುವಿಕೆ, ಗುಂಪುಚರ್ಚೆ, ಕ್ಷೇತ್ರ ಅಧ್ಯಾಯನ, ಶಾಲೆಗಳ ತರಗತಿ ಬೋದನೆಯ ಭೇಟಿ, ಮಕ್ಕಳು, ಶಿಕ್ಷಕರ, ಸಮುದಾಯದ ಸಂದರ್ಶನ.
ವ್ಯಾಪ್ತಿ : ಕರ್ನಾಟಕದ ಪ್ರಮುಖ ನಾಲ್ಕು ದಿಕ್ಕುಗಳಲ್ಲಿ ಸ್ಯಾಂಪಲ್ ಐದು ಶಾಲೆಗಳು, ಶಿಕ್ಷಕರು, ಮಕ್ಕಳು, ಸಮುದಾಯ. (ಗುಲಬರ್ಗಾ ಮತ್ತು ಯಾದಗಿರಿ, ಮೈಸೂರು ಮತ್ತು ಮಂಡ್ಯ, ಬಳ್ಳಾರಿ ಮತ್ತು ಹುಬ್ಬಳ್ಳಿ, ಬೆಳಗಾವಿ ಮತ್ತು ಬಾಗಲಕೋಟ)
ಉಪಸಂಹಾರ :
ಕನ್ನಡ ಭಾಷೆಯೆಂಬುವುದು ಒಂದು ಸುಂದರವಾದ ಕಲ್ಪನೆಯೊಂದಿಗೆ ಬೆರೆಯುವ ವಾತ್ಸವ. ನಾವೆಲ್ಲ ಉನ್ನತ ವ್ಯಾಸಂಗದಲ್ಲಿರುವ ವಿಧ್ಯಾರ್ಥಿಗಳಿಗೆ ಕನ್ನಡ ಕಲಿಸುವ ಕೆಲಸ ಮಾಡಬಹುದು ಆದರೆ ಇದೀಗತಾನೆ ಭಾಷೆಯನ್ನು ಕಲಿಯಲು ಪ್ರಾರಂಭ ಮಾಡಿರುವ ಮಕ್ಕಳಿಗೆ ಭಾಷೆ ಕಲಿಸುವುದ್ದಕ್ಕೆ ಆಗುವುದಿಲ್ಲ ಏಕೆಂದರೆ ಕನ್ನಡ ಕಲಿಕೆ ಅಷ್ಟು ಸುಲಭದ ಮಾತಲ್ಲ. ಭಾಷೆಯೆಂಬುವುದು ಇಂದು ಪ್ರತಿ ರಂಗದಲ್ಲಿಯೂ ಹಾಸುಹೊಕ್ಕಾಗಿದೆ. ಕನ್ನಡಿಗರಾದ ನಾವೆಲ್ಲ ಕನ್ನಡವನ್ನು ತಪ್ಪಿಲ್ಲದೇ ಕಲಿಯಬೇಕಾದರೆ ಮೂಲತಹ ನಮ್ಮ ಕನ್ನಡ ಕಲಿಕೆ ಶುದ್ಧವಾಗಿರಬೇಕು ಅದಕ್ಕಾಗಿ ಪ್ರಾಥಮಿಕ ಹಂತದ ಮಕ್ಕಳಲ್ಲಿ ಇಂದಿಗೂ ಅನೇಕ ಬಿಕ್ಕಟ್ಟುಗಳನ್ನು ನಾವೆಲ್ಲ ಕಾಣುತ್ತೇವೆ. ಅವುಗಳನ್ನು ಹೋಗಲಾಡಿಸಿ ಕನ್ನಡ ಕಲಿಕೆ ಉತ್ತಮಗೊಳಿಸಲು ನಾವೆಲ್ಲ ಈ ಮೇಲಿನ ಹಲವು ಅಂಶಗಳು ಕಾರ್ಯರೂಪಕ್ಕೆ ತರುವುದಾದರೆ ನಮ್ಮ ಮಕ್ಕಳು ಸರಾಗವಾಗಿ ಕನ್ನಡ ಕಲಿತು ಮುಂದಿನ ವಿಷಯಗಳ ವಿಧ್ಯಾಭ್ಯಾಸ ಸರಿಯಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಕೆ.ಎಂ.ವಿಶ್ವನಾಥ ಮರತೂರ.