ಅಂದು ನನ್ನ ಪ್ರಾರ್ಥಮಿಕ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಯಿತ್ತು ವಿಷಯ ಪರಿಸರ ಅದನ್ನು ವಿಶ್ವ ಬ್ಯಾಂಕ್ ನೆರವಿನಿಂದ ಒಂದು ಸಂಸ್ಥೆ ನಮ್ಮ ಊರಿನ ಶಾಲೆಯಲ್ಲಿ ಹಮ್ಮಿಕೊಂಡಿತ್ತು. ನಾನು ಬಾಗವಹಿಸಿ ಪ್ರಥಮ ಸ್ಥಾನ ಗಳಿಸಿದೆ. ಅದರ ಫಲವಾಗಿ ನನಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಯವರು ಬರೆದ ಪರಿಸರದ ಕತೆ ಪುಸ್ತಕ ಬಹುಮಾನವಾಗಿ ನೀಡಿದ್ದರು. ಮನೆಗೆ ಹೋಗಿ ಅದನ್ನು ಓದಲು ಕುಳಿತರೆ ಅರ್ಥವೆ ಆಗಲಿಲ್ಲಾ ಈ ವಿಷಯವನ್ನು ನನ್ನ ಗುರುಗಳ ಹತ್ತಿರ ಕೇಳಿದೆ. ಅವರು ಹೇಳಿದ್ದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಯವರು ಒಬ್ಬ ಮಾಹಾನ್ ಕತೆಗಾರರು ಅವರ ಪದ ಸಂಪತ್ತು ಚಿಕ್ಕವಬಾದ ನಿನಗೆ ಅರ್ಥವಾಗುವುದಿಲ್ಲಾ ಚಿಂತೆ ಬೇಡಾ ದಿನಾಲು ನಾನು ನಿಮಗೆ ಆ ಕತೆಗಳನ್ನು ಹೇಳುತ್ತೇನೆ. ಎಂದರು. ಅಂದು ಅವರ ವಿಚಾರಗಳನ್ನು ಓದುತ್ತಾ ಬಂದೆ ಅವರ ನೆನಪು ಯಾವಾಗಲು ಹಸಿರಾಗಿಯೆ ಉಳಿದಿದೆ ಏಕೆಂದರೆ ನಾನು ನನ್ನ ಜೀವನದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಅಂತಹ ದೊಡ್ಡವರ ಪುಸ್ತಕ ಬಹುಮಾನವಾಗಿ ಸಿಕ್ಕದ್ದು ನನ್ನ ಪುಣ್ಯ ಈಗಲು ಆ ಪುಸ್ತಕ ತುಂಬಾ ಜೋಪಾನವಾಗಿ ಇಟ್ಟಿದ್ದೇನೆ ಆಗಾಗ ಅದನ್ನು ಒಮ್ಮೆ ತಿರುವಿಹಾಕುವ ಕೆಲಸ ಮಾಡುತ್ತೇನೆ. ಅವರಂತಹ ಪದಸಂಪತ್ತು ಕಲಿಯಲು ಇಷ್ಟ ಪಡುತ್ತೇನೆ. ಅವರ ಅಭಿಮಾನದಿಂದ ಅವರ ಬಗ್ಗೆ ಹೀಗೆ ಬರೆದೇನು.
ಆತ್ಮ ಮತ್ತು ಮನಸ್ಸಿಗೆ ಆನಂದ ತರುವುದೆ ಆಧ್ಯಾತ್ಮ "
ಈ ಭೂಮಿಯಲ್ಲಿ ಯಾವುದು ಶಾಶ್ವತವಲ್ಲ, ಎಲ್ಲವು ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೆ ಜೀವಾತ್ಮ ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ ಸಂಸಾರದ ಈ ಸಾಗರದಲ್ಲಿ ತಾಪತ್ರೆಯಗಳು ವೇದನೆ ನೋವು,ಜಿಗುಪ್ಸೆ, ಹತಾಷೆ, ಸಂತೋಷ,ಇವೆಲ್ಲ ತಪ್ಪಿದಲ್ಲಾ, ಎಲ್ಲವು ನಮ್ಮನ್ನು ತಿಂದು ಹಾಕುವುದು ಸದಾ ನಮ್ಮ ಮನಸ್ಸು ಮತ್ತು ಆತ್ಮಗಳಿಗೆ ಚಿಂತನೆಗೆ ಹಚ್ಚುವುದು ನಿಂತಲ್ಲಿ ನಿಲ್ಲದೆ. ಕೂತಲ್ಲಿ ಕೂಡದೆ ಹೋಗುವುದು ಅತ್ತಿಂದ ಈತ್ತ ಮಂಗದಂತೆ ಜಿಗಿದಾಡುವದು ನಾವು ವಿನಾಕಾರಣ ಕೋಪಗೊಳ್ಳುವುದು ಮತ್ತೊಬ್ಬರ ಮೇಲೆ ಹಾಯಿಹರಿಯುವದು ಸುಮ್ಮನೆ ಜಗಳ ಮಾಡುವದು ಹೀಗೆ ಅನೇಕ ರೀತಿಯ ವಿಚಿತ್ರ ರೋಗಗಳಿಗೆ ತುತ್ತಾಗುತ್ತೇವೆ ಈಗ ಸದ್ಯದಲ್ಲಂತು ವಿಚಿತ್ರ ರೋಗಗಳು ಬರುತ್ತಿದ್ದು ಅದರ ನೆಲೆಯು ಯಾರಿಗೂ ತಿಳಿಯದಾಗಿದೆ ಒಂದೊಂದು ಸಲ ವೈದ್ಯರು ಕೂಡಾ ಕೈಚೆಲ್ಲಿ ಕುಳಿತುಕೊಳ್ಳುವ ಮಟ್ಟಕ್ಕೆ ಈ ಕಲಿಯುಗದ ಪರಿ ಬಂದು ನಿಂತಿದೆ ಎಲ್ಲಿ ನೋಡಿದರು ಮೋಸ ವಂಚನೆ ನಿಂದನೆ ಅಸಯ್ಯ ತಾಂಡವ ಆಡುತ್ತಿದೆ. ಯಾರ ಬಾಯಿಯಲ್ಲಿಯು ಒಂದು ಒಳ್ಳೆಯ ಮಾತು ಕೇಳಲು ಆಗುತ್ತಿಲ್ಲ ಎಲ್ಲಿ ನೋಡಿದರು ಅಜ್ಞಾನದ ಕತ್ತಲು ಆವರಿಸಿದೆ ಎಲ್ಲರು ಒಬ್ಬರು ಇನ್ನೊಬ್ಬರಿಗೆ ವಿರೋಧಿಗಳಾಗಿ ಕಾಣುತ್ತಿದ್ದಾರೆ.
ಬಹುದಿನಗಳಿಂದ ಈ ದೇಶವು ತುಳಿತ್ತಕ್ಕೊಳಗಾದ ಜನರನ್ನು ಮೇಲೆತ್ತುವ ಲೆಕ್ಕಾಚಾರ ಮರೆತಿದೆ ಅನಿಸುತ್ತಿದೆ. ಈ ವಿಷಯ ನಮ್ಮ ಕರ್ನಾಟಕದ ಪಾಲಿಗೆ ನಾವಿಂದು ವಿಚಾರ ಮಾಡಬೇಕಾದ ಅಗತ್ಯ ಮತ್ತು ಅನಿವಾರ್ಯವಿದೆ. ಈಗಾಗಲೇ ನಮ್ಮ ರಾಜ್ಯದ ರಾಜಕೀಯ ಹಳೆಯ ಅಧ್ಯಾಯ ಮುಗಿದು ಈಗ ಹೊಸ ಅಧ್ಯಾಯದತ್ತ ಸಿದ್ಧವಾಗುತ್ತಿದ್ದು. ಯಾರು ಯಾವ ರೀತಿಯಲ್ಲಿ ಮುಂದೆ ಹೊಸ ಗದ್ದುಗೆ ಏರಬೇಕು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಆದರೆ ಯಾರು ಈ ಸಮಾಜಕ್ಕಾಗಿ ದುಡಿದು ತುಡಿತಕ್ಕೆ ಹಿಂದಿನ ಮಗ್ಗುಲಲ್ಲಿ ಮಡಿದು ಹೋದ ನಾಯಕರ ಜನಾಂಗ ಯಾವುದು ಎಂದು ವಿಚಾರಿಸುವಲ್ಲಿ ನಪಾಸು ಆಗುತ್ತಿದೆ. ಕಾರಣ ರಾಜ್ಯ ರಾಜಕಾರಣದಲ್ಲಿಗ ಬರಿ ಮುಂದಿನ ಮುಖ್ಯಮಂತ್ರಿ ಯಾರು ಯಾವ ಜಾತಿಗೆ ಕೊಡಬೇಕು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮೀಸಲಾತಿ ಬರಿ ಹೆಸರಾಗಿ ಉಳಿಯದೆ, ಹಸಿರಾಗಿ ಮೂಡಿ ಬರಲಿ
ಬಹುದೊಡ್ಡ ಭಾರತ ಬಹುಸಂಖ್ಯಾತರೆ ಇದಕ್ಕೆ ಬಂಡವಾಳ , ಆದರೆ ಅವರನ್ನೆ ಕಡೆಗಣಿಸಲಾಗುತ್ತಿದೆ . ಎನಿಸುತ್ತಿದೆ ಭಾರತದ ಬಡತನ ರೇಖೆಯ ಕೆಳಗಿರುವ ಜನವರ್ಗದ ಜಾತಿ ಮತ್ತು ಸಮುದಾಯಗಳ ಪಟ್ಟಿಯನ್ನು ಸಾಚಾರ ಆಯೋಗದಲ್ಲಿ ಉಲ್ಲೇಖಿಸಲಾಗಿದೆ. ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುತ್ತದೆ.ಆದರೆ ಧಾರ್ಮಿಕ, ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಈ ನಿಯಮಗಳಿಂದ ಹೊರತುಪಡಿಸಲಾಗಿದೆ. ಪ್ರಮುಖವಾದುದ್ದೆಂದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಸರ್ಕಾರ ಇದನ್ನು ಜಾರಿಗೊಳಿಸಿದೆ.
!!! ಗೊಂದಲದ ಗೂಡು,ಸದ್ಯದ ನಮ್ಮ ರಾಜಕೀಯ !!!
ನಮ್ಮ ಸದ್ಯದ ರಾಜ್ಯ ರಾಜಕೀಯದಲ್ಲಿ ಅರಾಜಕತೆಯು ಅತ್ಯಂತ ಸುಂದರವಾಗಿ, ಮನಮಿಡಿಯುವಂತೆ ಎದ್ದು ಕಾಣುತ್ತಿದೆ. ಸದ್ಯ ಮತದಾರ ದೊಡ್ಡ ಗೊಂದಲದಲ್ಲಿದ್ದಾನೆ. ಯಾರು ಸರಿ ಮತ್ತು ಯಾರು ತಪ್ಪು ಯಾರಿಗೆ ಯಾವ ಪಕ್ಷ್ಯಕ್ಕೆ ನಮ್ಮ ಮತ ಹಾಕಲಿ ಎನ್ನುವ ಲೆಕ್ಕಚಾರದಲ್ಲಿ ಮುಳುಗಿದ್ದಾನೆ. ಮನೆಗೊಬ್ಬ ರಾಜಕಾರಣಿ ಎಂಬಂತೆ ಎಲ್ಲಿ ನೋಡಿದರು ಅಲ್ಲಿ ನಾಯಿಕೊಡೆಯಂತೆ ಬೆಳಿಯುತ್ತಿದ್ದಾರೆ. ಅವರ ಈ ಬೆಳಿಯುವ ರೀತಿ ಎಷ್ಟು ಪೂರಕ ಮತ್ತು ಮಾರಕ ಎಂದು ವಿಚಾರಿಸುತ್ತಾ ಹೋದರೆ ವಿಚಿತ್ರ ಅನುಭವಗಳು ಎದ್ದು ಕಾಣುತ್ತವೆ.
!!! ಕೇಂದ್ರ ಸರ್ಕಾರ ಹಂಗ,ರಾಜ್ಯ ಸರ್ಕಾರ ಹಿಂಗ, ಇವರಿಬ್ಬರ ನಡುವೆ ನಾವು ಹೆಂಡ ಕುಡಿದ ಕೋತಿಹಂಗ !!!
ಈ ನಮ್ಮ ಪ್ರಸ್ಥುತ ರಾಜಕೀಯ ವ್ಯವಸ್ಥೆ ಹದಗೆಟ್ಟು ನಿಂತಿದೆ . ಎಲ್ಲವು ಅವರವರ ಹೊಟ್ಟೆ ತುಂಬಿಸಿಕೊಳ್ಳಲು ನೋಡುವರೆ ಹೊರತು ಈ ದೇಶದ ಸೇವೆ ಮಾಡಬೇಕು ಎನ್ನುವ ಲೆಕ್ಕಾಚಾರ ಯಾರಲ್ಲಿಯೂ ಇಲ್ಲ. ನಾನು ಒಮ್ಮೆ ಆರಿಸಿ ಬಂದರೆ ಸಾಕು ಮುಂದಿನದ್ದು ನೋಡಿದರಾಯಿತು ಎನ್ನುವ ಲೆಕ್ಕಾಚಾರದಲ್ಲಿ ಇರುವರು ನಮ್ಮ ರಾಜಕಾರಣಿಗಳು. ಜನರು ಈ ರಾಜಕೀಯ ಗಿಮಿಕ್ ನಿಂದ ಸೋತು ಹೋಗಿದ್ದಾರೆ.