ಇದೆಲ್ಲಾ ಸಂಭಾಷಣೆ ನಾನು ಕೇಳುತ್ತಲೆ ಇದ್ದೆ ಆದರೆ ಇವರಿಬ್ಬರಲ್ಲಿ ನನ್ನ ಅಭಿಪ್ರಾಯ ಒಬ್ಬರಾದರು ಕೇಳಲೇಯಿಲ್ಲಾ ಬರಿ ಇವರು ತಮ್ಮ ಮರಿಯ್ಯಾದೆಗಾಗಿ ಇವನು ತನ್ನ ಪ್ರೀತಿಯ ಉಳಿವಿಕೆಗಾಗಿ ಒಂದೆಸಮನೆ ಕಿತ್ತಾಟ ಸುಮಾರು ಹೊತ್ತು ನಡೆಯಿತು. ನಾನು ಹೆಣ್ಣು ಜೀವ ನಡುವೆ ಕುಳಿತು "ಈತ್ತ ಅಪ್ಪ ಅಮ್ಮನ ಮರೆತೆರ ಅವರ ಮರಿಯ್ಯಾದೆ ಹೋಗುತ್ತದೆ. ಇತ್ತ ಪ್ರೀತಿಸಿದ ಹುಡುಗನ ಮರೆತರೆ ಅವನಿಗೆ ನಾನು ಮೋಸ ಮಾಡಿದಂತೆ ಆಗುತ್ತದೆ. ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸಲು ತುಂಬಾ ಸಂಕಷ್ಟ ಒದಗಿ ಬಂದ ಕಾಲವಿದು. ಆದರೆ ಹೆಣ್ಣಿನ ಅಂತ:ಕರಣ ಕೇಳುವ ಮನಸ್ಸು ಮಾತ್ರ ಈ ಗಂಡು ಸಮಾಜಕ್ಕೆ ಇಲ್ಲಾ ಎಂಬುವುದು ನಾನು ಇಂದು ಅರಿತ ದೊಡ್ಡ ಸತ್ಯ.
" ನೋಡಮ್ಮಾ ನಿನಗೆ ಆ ಹುಡುಗಾನೆ ಬೇಕು ಅಂದ್ರ ನಾವು ನಿನಗೆ ಇಲ್ಲಿಯವರೆಗೂ ಬೆಳಿಸಿದ ಎಲ್ಲವು ಮರೆತು ಅವನನ್ನೊಂದಿಗೆ ಹೋಗಿ ಬದುಕುವ ಆಸೆ ನಿನಗೆ ಇದ್ದರೆ, ಹೋಗು ಆದರೆ ನಾವು ನಿನ್ನ ಪಾಲಿಗೆ ನೀ ಹೋದ ಕ್ಷಣದಲ್ಲೆ ಸತ್ತಂತೆ ನೆನಪಿರಲಿ. ಈ ತವರು ಮನೆಯ ಹಾದಿಯ ಜೊತೆಗೆ ನಾವು ಮನೆಯ ಎಲ್ಲಾ ಸದಸ್ಯರು ವಿಷ ಕುಡಿದು ಸಾಯುವುದು ಗ್ಯಾರಂಟಿ, “ ಹೀಗೆ ಅಮ್ಮ ಅಪ್ಪ ಹೇಳಿದರು. “ ಅವನು ಅಮ್ಮೂ ನೀನು ನನ್ನ ಮರೆತೆರ ನಾನು ನಿಜ ಜೀವನದಲ್ಲಿ ಬದುಕಲಾರೆ ನಿನ್ನ ಪ್ರೀತಿಯಿಲ್ಲದೆ ಕ್ಷಣ ಕ್ಷಣ ಸಾಯುವ ಮನಸ್ಸು ನನಗಿಲ್ಲಾ ಅದಕ್ಕಾಗಿ ವಿಷ ಸೇವಿಸಿ ನಾನು ಸಾಯುವೆ ನೆನಪಿರಲಿ ನನ್ನ ಸಾವು ಬದುಕು ನಿನ್ನ ಕೈಯಲ್ಲಿದೆ.” ಅಂತಾ ಅವನು.
ಇವರಿಬ್ಬರ ಮಧ್ಯೆ ನಾನು ಯಾವುದು ಆರಿಸಿಕೊಳ್ಳಿಲಿ ಎನ್ನುವ ಮಾತು ನನಗೆ ತಿಳಿಯದಾಯಿತು. ಇಲ್ಲಿ ಹೆಣ್ಣಾಗಿ ಹುಟ್ಟಿದ್ದೆನ್ನ ತಪ್ಪೆ? ಅಥವಾ ವಯಸ್ಸಿಗೆ ಬಂದ ನಾನು ಪ್ರೀಯಕರನನ್ನು ಆರಿಸಿಕೊಂಡು ಒಬ್ಬ ಒಳ್ಳೆಯ ಹುಡುಗನನ್ನು ಪ್ರೀತಿಸಿರುವುದು ತಪ್ಪೆ ಇಷ್ಟಕ್ಕು ನಾನು ಮಾಡಿದ ತಪ್ಪಾದರು ಏನು ಎಂದು ಅರ್ಥವಾಗಲಿಲ್ಲಾ. ನಾನು ತೆಗೆದುಕೊಳ್ಳಬೇಕಾದ ನಿರ್ಧಾರವಾದರು ಏನು ಎಂದು ಸಮರ್ಥಳಾಗಲಿಲ್ಲಾ.. ಕೊನೆಗೆ ಒಂದು ದಿನ ನನ್ನ ನಿರ್ಧಾರ ಹೀಗೆ ಮಾಡಿದೆ..
ಅಂದು ಮೆನಯಲ್ಲಿ ಯಾರು ಇರಲಿಲ್ಲಾ ಒಂದಿಷ್ಟು ಯೋಚಿಸಿದೆ. ನನ್ನ ಪ್ರೀತಿಸಿದವನನ್ನು ಅರೆಸಿ ಹೋದರೆ ಮನೆಯವರನ್ನು ಕಳುದುಕೊಳ್ಳಬೇಕು, ಮನೆಯವರನ್ನು ಆರಿಸಿಕೊಂಡರೆ ನನ್ನ ಪ್ರೀತಿಸಿದ ಹುಡುಗನನ್ನು ಕಳಿದುಕೊಳ್ಳಬೇಕು. ಇವರಿಬ್ಬರು ಚೆನ್ನಾಗಿ ಇರಬೇಕಾದರೆ ಅಡ್ಡಿಯಾದ ವ್ಯಕ್ತಿ ನಾನು ಒಬ್ಬಳೆಯಾಗಿರುವುದರಿಂದ ನಾನೆ ಇಲ್ಲವಾದರೆ ಯಾರಿಗೂ ತೊಂದರೆಯಾಗದು. “ಅಲ್ಲಿಯೆ ಇದ್ದ ತಾತನ ನಿದ್ರೆಯ ಮಾತ್ರೆಗಳನ್ನು ಒಂದೊಂದಾಗಿ ಸೇವಿಸುತ್ತಾ ಈ ಮಹಿಳೆಯಾಗಿ ಮುಂದಿನ ಜನ್ಮದಲ್ಲಿ ಹುಟ್ಟಿಸಬೇಡಾ ಶಿವನೆ ಈ ಹೆಣ್ಣಿನ ಬದುಕು ಹೀನಾಯ ಎನ್ನುವುದ್ದಕ್ಕೆ ನಾನೆ ತಕ್ಕ ಉದಾಹರಣೆ ಈ ಸಮಾಜ ಮಹಿಳೆಯನ್ನು ಗರಗಸ ಕೊಯಿದಂತೆ ಹಿಂದೆ ಹೋದರು ಕೊಯುತ್ತದೆ, ಮುಂದೆ ಹೋದರು ಕೊಯುತ್ತದೆ. '' ನಾನು ಅನೇಕ ನಿದ್ರೆ ಮಾತ್ರೆ ಸೇವಿಸಿ ಹಾಗೆ ನನ್ನ ಬದುಕಿನ ಕೆಲವು ಮಧುರ ಕ್ಷಣಗಳನ್ನು ನೆನಸಿ ಹಾಸಿಗೆಗೆ ಉರುಳಿದೆ ನನಗೆ ತಿಳಿಯದೆ ನಾನು ಚಿರನಿದ್ರೆಗೆ ಜಾರಿದೆ ಈಹ ಲೋಕದ ಜಂಜಾಟದಿಂದ ನನ್ನ ಮನಸ್ಸು ದೇಹಕ್ಕೆ ವಿಶ್ರಾಂತಿ ನೀಡಿದೆ....