ಮೋದಿಯಂಬ ಮೋಡಿಗಾರ ಮನುಷ್ಯನ ಅಬ್ಬರಕ್ಕೆ ಬೊಬ್ಬೆರೆಗಾದ ಅನೇಕ ಯುವಕರಲ್ಲಿ ನಾನೂ ಒಬ್ಬ. ಮೌನವಾಗಿಯೇ ಹತ್ತು ವರ್ಷಗಳ ಆಡಳಿತ ಮುಗಿಸಿದ ಆರ್ಥಿಕ ತಜ್ಞ ತನ್ನ ಅಧಿಕಾರ ಅವಧಿಯಲ್ಲಿ ಎಷ್ಟೊ ಹಗರಣಗಳಾದರೂ ಮಾತನಾಡಿಲ್ಲ ಆಗ ನಾನೇ ಸ್ವತ: “ಮೌನ ಸಾಕು, ಮೋದಿ ಬೇಕು” ಎಂಬ ಲೇಖನ ಬರೆದಿದ್ದೆ. ಅತ್ಯಂತ ಕಠಿಣ ಪರಿಸ್ಥಿತಿಯ ಮೂಲಕ ರಾಜಕೀಯದಲ್ಲಿ ಮೇಲೆದ್ದ ಮೋದಿಯ ಜೀವನ ಚರಿತ್ರೆಯೊಂದು ಓದಿದ್ದೆ. ಅವರ ಬದುಕಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ ಎಂಬುವುದನ್ನು ಅರೆತುಕೊಂಡಿದ್ದೆ. ಇಂತಹ ಬರಿಗಾಲಿನ ಫಕೀರನೊಬ್ಬನು ಈ ದೇಶದ ಆಡಳಿತ ಹಿಡಿದರೆ ಅದ್ಯಾವುದೇ ಆಮಿಷ್ಯಕ್ಕೊಳಪಡದೇ ಈ ದೇಶದ ಮತದಾರರ ಪರವಾಗಿ ದುಡಿದು ದೇಶವನ್ನು ದೇಶದ ಬಡವರನ್ನು ಕಾಯುವ ಕೆಲಸ ಮಾಡಬಹುದು ಎಂಬ ನಂಬಿಕೆಯಿತ್ತು ಆದರೆ ಮೋದಿಯವರೂ ಕೂಡ ಒಬ್ಬ ಅಪ್ಪಟ ಚಾಣಕ್ಷ ರಾಜಕಾರಣಿ ಎಂಬುವುದು ಕಳೆದ ತಮ್ಮ ಆಡಳಿತದ ಅವಧಿಯಲ್ಲಿ ಸಾಬೀತು ಮಾಡಿದರು.
0 Comments
|
ಇಲ್ಲಿಯವರೆಗೆ...
October 2023
"
|