ಅದನ್ನು ಮನಗಂಡ ಸರ್ಕಾರ ಚಿಂತನೆ ಮಾಡಿ ಮಕ್ಕಳನ್ನು ಈ ರೀತಿ ಗುರುತಿಸಿ ಅವರ ಶ್ರೇಯೊಭೀವೃದ್ಧಿಗೆ ಶಿಕ್ಷಣ ತಜ್ಞರು ಸಮನ್ವಯ ಶಿಕ್ಷಣವನ್ನು ಜಾರಿಗೆ ತಂದು ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣದ ಕಡೆಗೆ ಗಮನಕೊಡಲು ನಿರ್ಧರಿಸಿದ್ದಾರೆ. ಹಾಗಾದರೆ ಈ ಸಮನ್ವಯ ಶಿಕ್ಷಣ ಎಂದರೆ ಏನು ? ಗ್ರಾಮೀಣ ಮಕ್ಕಳ ಪಾಲಿಗೆ ಅದರ ರುಚಿ ಸಿಕ್ಕಿದಿಯೆ ? ಎಂಬ ಹತ್ತು ಹಲವು ಪ್ರಶ್ನೆಗಳು ಎದುರಾಗುತ್ತವೆ. ಅವುಗಳ ನೈಜ ಹುಡುಕಾಟವೆ ನನ್ನದು .
ಸಮನ್ವಯ ಶಿಕ್ಷಣದ ಅರ್ಥ: ವಿಶೇಷ ಅಗತ್ಯವುಳ್ಳ ಮಕ್ಕಳು ಸಹ ಇತರೆ ಮಕ್ಕಳಂತೆ ಬೆಳೆಯಲು , ವಿಕಾಸ ಹೊಂದಲು ಸಹಾಯಕವಾಗುವ ಪರಿಸರವನ್ನು ಒದಗಿಸಬೇಕು. ವಿಶೇಷ ಅಗತ್ಯವುಳ್ಳ ಮಕ್ಕಳಿಗೂ ಸಾಮಾನ್ಯ ಶಾಲಾ ತರಗತಿಗಳಲ್ಲಿ ಇತರೆ ಮಕ್ಕಳಿಗೆ ನೀಡುವಂತಹ ಶೈಕ್ಷಣಿಕ ಸೌಲಭ್ಯ ಮತ್ತು ಅನುಭವವನ್ನು ಒದಗಿಸುವುದರ ಜೊತೆಗೆ ಪೂರಕ ಚಟುವಟಿಕೆಗಳನ್ನು ಕೈಗೊಂಡು ಇತರೆ ಮಕ್ಕಳಂತೆಯೆ ಈ ಮಕ್ಕಳಿಗೂ ಸಹ ಕಲಿಯಲು ಸಾದ್ಯವಾಗುವಂತಹ ವಾತಾವರಣ ಒದಗಿಸುವುದು.
ಸಮನ್ವಯ ಶಿಕ್ಷಣದ ಗುರಿ : ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣದ ನಿಟ್ಟಿನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶವನ್ನು ಹೆಚ್ಚಿಸುವುದು ಮತ್ತು ಸೂಕ್ತ ಪರಿಸರದಲ್ಲಿ ಎಲ್ಲರಿಗೂ ಶಿಕ್ಷಣ ನೀಡುವುದು.
ವ್ಯಾಪ್ತಿ :
- ಸಮನ್ವಯ ಶಿಕ್ಷಣವು ಎಲ್ಲಾ ರೀತಿಯ ಮಕ್ಕಳನ್ನು ಒಳಗೊಂಡಿರುತ್ತದೆ. ಆದರೆ ಅತೀ ತೀವ್ರ ಬುದ್ಧಿಮಾಂದ್ಯ ಮೆದುಳಿನ ಪಾಶ್ವರ್ವಾಯು ,ಆಟಿಸಂ ಮತ್ತು ಬಹುವಿಧ ಅಂಗವಿಕಲತೆ ಹೊಂದಿದವರನ್ನು ಸಮನ್ವಯ ಶಿಕ್ಷಣದ ಅಡಿಯಲ್ಲಿ ತರಲು ಸಾದ್ಯವಾಗುತ್ತಿಲ್ಲಾ. ಏಕೆಂದರೆ ಇಂತಹ ಮಕ್ಕಳಿಗೆ ಕಲಿಕೆ ಮತ್ತು ಗೃಹಿಕೆಯ ಸಾಮರ್ಥ್ಯ ಅತ್ಯಂತ ತಳಮಟ್ಟದಲ್ಲಿ ಇರುತ್ತದೆ. ಇವರನ್ನು ಇತರ ಮಕ್ಕಳೊಂದಿಗೆ ಸಮನ್ವಯಗೊಳಿಸಿ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲಾ. ಇಂತಹ ಮಕ್ಕಳಿಗೆ ಗೃಹಾದಾರಿತ ಶಿಕ್ಷಣ ನೀಡಬಹುದು. ಇದು ಮಗುವುವಿನ ಜೀವನದ ಕೆಲವು ಪ್ರಾಥಮಿಕ ಕೌಶಲ್ಯಗಳನ್ನು ನೀಡಲು ವ್ಯವಸ್ಥೆಗೊಂಡಿದೆ ಹಾಗೂ ಪೋಷಕರಿಗೆ ಅರಿವನ್ನು ಮೂಡಿಸಲಾಗುತ್ತದೆ.
- ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯವಾದ ಎಲ್ಲಾ ರೀತಿಯಾ ಕಲಿಕೋಪಕರಣ ಹಾಗೂ ಸಾಧನ ಸಾಮಾಗ್ರಿಗಳನ್ನು ಒದಗಿಸಲು ಸಾಧ್ಯವಾಗದಿರಬಹುದು. ಆದ್ಯಾಗೂ ಸ್ಥಳೀಯ ಲಭ್ಯ ಉಪಕರಣ ಬಳಸಿ ಎಲ್ಲಾ ಮಕ್ಕಳಿಗೆ ಕಲಿಕೆ ಉಂಟುಮಾಡಬಹದು .
- ಎಲ್ಲಾ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಸಾಮಾನ್ಯ ಶಾಲೆ, ಸಾಮಾನ್ಯ ಶಿಕ್ಷಕರು/ರೂಪುಗೊಂಡಿರುತ್ತಾರೆ.
- ಸ್ಥೂಲವಾಗಿ ಎಲ್ಲಾ ಚಟುವಟಿಕೆಗಳನ್ನು ಎಲ್ಲಾ ಮಕ್ಕಳಿಗೆ ಒದಗಿಸಿ ಮಗುವನ್ನು ಒಂದು ನೀರಿಕ್ಷಿತ ಮಟ್ಟಕ್ಕೆ ತಲುಪುವಂತೆ ವ್ಯವಸ್ಥೆಗೊಳಿಸುವುದು ಸಮನ್ವಯಶಿಕ್ಷಣದ ಆಶೆಯವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿ ಮಗುವು ಭಾಗವಹಿಸುವಂತಹ ಚಟುವಟಿಕೆಗಳನ್ನು ರೂಪಿಸುವುದು ಸವಾಲಾದರೂ - ಕಾರ್ಯರೂಪಕ್ಕೆ ತರುವುದು ಅನಿವಾರ್ಯ್ಯವಾಗಿದೆ.
- ವಿಶೇಷ ಅಗತ್ಯವುಳ್ಳ ಮಕ್ಕಳು ಸಾಮಾನ್ಯ ಮಕ್ಕಳಂತೆ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಅವರ ಸಾಮಾರ್ಥ್ಯಕ್ಕೆ ತಕ್ಕಂತೆ ಅವಕಾಶ ಕಲ್ಪಸುವುದು.
- ವಿಶೇಷ ಅಗತ್ಯವುಳ್ಳ ಮಕ್ಕಳು ಮತ್ತು ಇತರ ಮಕ್ಕಳ ನಡುವೆ ಆರೋಗ್ಯಕರ ಸಾಮಾಜಿಕ ಸಂಬಂಧಗಳನ್ನು ಬೆಳೆಸುವ ಮೂಲಕ ಈ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು.
- ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಎಲ್ಲರು ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವಂತೆ ಪ್ರೇರೆಪಿಸಬಹುದು
- ವಿಶೇಷ ಅಗತ್ಯವುಳ್ಳ ಮಕ್ಕಳ ಜೀವನ ಮಟ್ಟ ಉನ್ನತಗೊಳಿಸಿ , ಅವರ ಪೌರ ಹಕ್ಕುಗಳನ್ನು ಬದ್ರಪಡಿಸಬಹುದು .
- ವಿಶೇಷ ಅಗತ್ಯವುಳ್ಳ ಮಕ್ಕಳ ಸಾಮಾನ್ಯ ಧ್ಯೇಯ ಮತ್ತು ಆತ್ಮ ವಿಶ್ವಾಸದಿಂದ ಎದುರಿಸಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಮಾಡುವುದು.
- ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕೇವಲ ಅನುಕಂಪ ತೋರದೆ ಸಮಾನ ಅವಕಾಶ ತೋರಿಸುವ ಮನೋಭಾವ ಶಿಕ್ಷಕರಲ್ಲಿ ಹಾಗೂ ಸಮುದಾಯದಲ್ಲಿ ಬೆಳೆಸುವುದು.
- ಪ್ರತಿ ಮಗುವು ತನ್ನಲ್ಲಿ ಹುದುಗಿರುವ ಸಾಮರ್ಥ್ಯಗಳ ಸಂಪೂರ್ಣ ಸಿದ್ಧಿಗೆ ಶಿಶು ಸ್ನೇಹಿ ಕಲಿಕೆಯ ಪರಿಸರವನ್ನು ಒದಗಿಸುವುದು
ಈ ಶಿಕ್ಷಣ ನಮ್ಮ ಹೆಣ್ಣು ಮಗುವಿನ ಕಡೆ ಹೋದರೆ ಈ ಪ್ರತಿಶತ ಕಡಿಮೆಯೆ ಆಗುತ್ತದೆ . ಒಂದು ಊರಿನ ಅಂದಾಜಿನ ಪ್ರಕಾರ ನೋಡಿದರೆ ಇನ್ನು ನಮ್ಮ ಹೆಣ್ಣು ಮಗುವಿಗೆ ಈ ಸೌಲಭ್ಯ ಸಿಗುತ್ತಿಲ್ಲ ಇದಕ್ಕೆ ಮೂಲ ಕಾರಣ ಪಾಲಕರು ಪೋಷಕರು ತಮ್ಮ ಮಗ/ಮಗಳು ಈ ಸ್ಥಿತಿಯಲ್ಲಿ ಇದ್ದು ಕಲಿತೇನು ಸಾಧಿಸಬೇಕು ಎನ್ನುವ ಕೆಟ್ಟ ನಿರ್ಧಾರ ಮಾಡಿ ಅವರ ಬದುಕಿನ ಮೇಲೆ ಬರೆ ಎಳೆಯುವ ಕೆಲಸ ಸಮುದಾಯದಿಂದ ನಡೆಯುತ್ತಿದೆ .
ಸರ್ಕಾರದ ಅಧಿಕಾರಿಗಳ ನಿರ್ಲಕ್ಷ್ಯ : ವಿಶೇಷ ಅಗತ್ಯವುಳ್ಳ ಮಕ್ಕಳು ಕೂಡಾ ಕಲಿಯಬಹುದು ಅವರಿಗೂ ವಿಶೇಷ ಅಬಕಾಶವಿದೆ ಎಂಬ ಮಾಹಿತಿ ಸಮುದಾಯಕ್ಕೆ ಮುಟ್ಟಿಸಬೇಕಾದ್ದು ಅಧಿಕಾರಿಗಳ ಕೆಲಸ ಈಗಾಗಲೇ ಸಾಕಷ್ಟು ಮಾಹಿತಿ ಹೊಂದಿರುವ ಪತ್ರಗಳು ಹಾಗೂ ಬೇರೆ ಮಾಧ್ಯಮಗಳು ಇವೆ ಆದರೆ ಅವು ಯಾವು ನಮ್ಮ ಮುಗ್ಧ ಗ್ರಾಮೀಣ ಜನತೆಯ ಪಾಲಿಗೆ ಮಾತ್ರ ಆಕಾಶದ ನಕ್ಷತ್ರವಾಗುತ್ತಿವೆ .
ಇಂತಹ ಶಿಕ್ಷಣ ನೈಜವಾಗಿ ಮಕ್ಕಳಿಗೆ ಸಿಗಬೇಕಾದರೆ ಎಲ್ಲರು ಅದರ ಜೊತೆಗೆ ಪ್ರಮಾಣಿಕವಾಗಿ ಕೆಲಸ ಮಾಡಬೇಕಾದ ಅಗತ್ಯ ಹಾಗೂ ಅನಿವಾರ್ಯವಿದೆ . ಸರಕಾರಿ ಅಧಿಕಾರಿಗಳು , ಶಿಕ್ಷಕರು , ಸಮುದಾಯದವರು , ಸಂಘ ಸಂಸ್ಥೆಯವರು ಒಟ್ಟಾರೆಯಾಗಿ ದುಡಿದು ಈ ಮಕ್ಕಳ ಬೆಳವಣಿಗೆಗೆ ಶ್ರಮಿಸಬೇಕಾದ ಕಾಲ ಇದಾಗಿದೆ . ಬನ್ನಿ ಹಾಗಾದರೆ ಈ ಮಕ್ಕಳ ಉತ್ತಮ ಶಿಕ್ಷಣ ದೊರಕಲು ನಾವೆಲ್ಲ ಒಂದು ಹೆಜ್ಜೆ ಇಡೋಣ ಏಕೆಂದರೆ " Let us Change ourself, world Change it self “ ಅಲ್ಲವಾ? .