ಹಳ್ಳಿಗಳಲ್ಲಿರುವ ನನ್ನ ಪ್ರೀತಿಯ ಸಮುದಾಯದ ಜನರೆಲ್ಲರೂ ಬರಿ ಊರಿನ ಶಿಕ್ಷಕರನ್ನೇ ದೂರುತ್ತಾ ಮಾಸ್ತಾರ್ ಸರಿಯಿಲ್ಲ, ಶಾಲೆ ಸರಿಯಿಲ್ಲ, ಶಿಕ್ಷಣ ಸರಿಯಿಲ್ಲ, ಅವರು ಏನು ಕಲಿಸೋದಿಲ್ಲ ಎನ್ನುವ ಬದಲು ನೀವು ಕೂಡ ನಿಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮೆನೆಯಲ್ಲಿ ಕಣ್ಣು ಹಾಯಿಸಬೇಕಾದ ಅಗತ್ಯವಿದೆ. ಶಾಲೆಯಲ್ಲಿ ಶಿಕ್ಷಕರು ಎಷ್ಟೆ ಹೇಳಿಕೊಟ್ಟರು, ಮಕ್ಕಳು ಮನೆಯ ವಾತಾವರಣದಲ್ಲಿ ಕಲಿಯುವುದು ಅದಕ್ಕಿಂತ ಅವಶ್ಯಕವಿದೆ. ನಾವು ಮಕ್ಕಳಿಗಾಗಿ ಅವರ ಆಶೆಯಕ್ಕೆ ತಕ್ಕಂತೆ ಮನೆಯ ವಾತಾವರಣ ತಿಳಿಗೊಳಿಸಿದರೆ ಮಕ್ಕಳ ಶೈಕ್ಷಣಿಕ ಬದುಕು ಇನ್ನಷ್ಟು ಹಸನಾಗುತ್ತದೆ. ಏಕೆಂದರೆ, “ಮನೆಯೇ ಮೊದಲ ಪಾಠ ಶಾಲೆ” ಅಲ್ವೆ. ಹೀಗಾಗಿ ಪಾಲಕರಾದ ನಾವುಗಳಲ್ಲೆರೂ ಬಹಳ ಮುಖ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಸರಕಾರಿ ಶಾಲೆಗಳಲ್ಲಿ ಓದಿಸುವ ಮಕ್ಕಳ ಪಾಲಕರು ನಿಮ್ಮ ಮಕ್ಕಳಿಗೆ ನೀವು ಮಾದರಿಯಾಗುವ ಮೂಲಕ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕಾಗಿ ಶ್ರಮವಹಿಸಿಬೇಕಿದೆ.
ಮಕ್ಕಳು ಎಂದರೆ, ನಮ್ಮ ದೇಶದ ಭವಿಷ್ಯ. ನಮ್ಮ ಮನೆ ಬೆಳಗುವ ದೀಪ. ಅವರಿಂದಲೆ ನಮ್ಮ ಮನೆಯ ಬಡತನ ನೀಗಿ ಸಿರಿತನ ಬರುತ್ತದೆ. ಅದಕ್ಕಾಗಿ ಶಾಲೆಗೆ ಹೋಗುವ ಮಕ್ಕಳ ಎಲ್ಲ ಪೆÇೀಷಕರು ಕೆಲವು ವಿಶೇಷವಾದ ವಿಚಾರಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಸಾಮಾನ್ಯವಾಗಿ ನಮ್ಮ ಮಕ್ಕಳು ಮನೆಯಲ್ಲಿ ಓದದೇಯಿರದಂತೆ ತಡೆದಿರುವ ದೊಡ್ಡ ವೈರಿಯಂದರೆ ಈ ಟಿವಿ ಮತ್ತು ದಾರಾವಾಹಿಗಳು ಪಾಲಕರಾದ ನೀವು ಟಿವಿಯ ಮುಂದೆ ಕುಳಿತು ಮಕ್ಕಳಿಗೆ ಓದು ಎಂದು ಹೇಳಿದರೆ ಅವರು ಓದಲಾರರು ರಾತ್ರಿ 8:00 ರ ಹೊತ್ತಿಗೆ ಟಿವಿ ಆಫ್ ಮಾಡಿ, 8:00 ರ ನಂತರ ಟಿವಿಯಲ್ಲಿ ನಿಮ್ಮ ಮಗುವಿಗಿಂತ ಹೆಚ್ಚು ಮುಖ್ಯವಾದುದು ಏನೂ ಇಲ್ಲ. ಜ್ಞಾನ ಕೊಡುವ ಕಾರ್ಯಕ್ರಮಗಳನ್ನು ತೋರಿಸಿ ಉಳಿದವುಗಳಿಂದ ನೀವು ದೂರವಿದ್ದು ನಿಮ್ಮ ಮಕ್ಕಳಿಗೂ ದೂರವಿಟ್ಟರೆ ಒಳಿತಾಗುತ್ತದೆ.
ನಿಮ್ಮ ಮಗುವಿಗಾಗಿ ಅವನ ಶೈಕ್ಷಣಿಕ ಸ್ಥಿತಿಗತಿ ಅರೆಯಲು ಪ್ರತಿದಿನ ಕನಿಷ್ಠ 30-45 ನಿಮಿಷಗಳು ಬಿಡುವು ಮಾಡಿಕೊಳ್ಳಿ. ನಾವು ಏನು ಕಲಿತಿಲ್ಲ ಅವರು ಏನು ಬರೆದಿದ್ದಾರೆ ಓದುತ್ತಾರೆ ಎಂದು ನಮಗೆ ತಿಳಿಯದು ಎಂದು ಗ್ರಾಮೀಣ ಭಾಗದ ಪಾಲಕರು ಹೇಳುವುದು ಸಹಜ ಆದರೆ ನೀವು ಓದಲೇಬೇಕು ಎಂದೇನಿಲ್ಲ, ಮಕ್ಕಳಿಗೆ ಎದುರು ಕೂಡಿಸಿಕೊಂಡು ಇವತ್ತು ಟೀಚರ್ ಏನು ಹೇಳಿದರು ತೆಗೆ ನೋಡೋಣ ಅಂದ್ರೆ ಸಾಕು ಮಕ್ಕಳು ಖಂಡಿತಾ ಓದುತ್ತಾರೆ. ಮೊದಮೊದಲು ಸ್ವಲ್ಪ ಹಠ ಮಾಡಿದರು, ಓದಿದಂತೆ ಮೋಸ ಮಾಡಿದರು ಮುಂದೆ ಅದು ರೂಢಿಯಾಗಿ ಅಭ್ಯಾಸ ತಾನಾಗಿಯೇ ಮುಂದುವರೆಯುತ್ತದೆ. ಖಾಸಗೀ ಶಾಲೆಗೆ ಹಾಕಿರುವ ಪಾಲಕರು ನಿಮ್ಮ ಮಕ್ಕಳ ಡೈರಿ ಪರಿಶೀಲಿಸಲು ಮರೆಯದಿರಿ. ಮಕ್ಕಳಿಗಾಗಿ ನಿಮ್ಮ ಮನೆಯ ಸಂಸಾರದ ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ ಅವರ ಮನೆಗೆಲಸವನ್ನು ಪೂರ್ಣಗೊಳಿಸಲು ಸಹಾಯಮಾಡಿ. ಒಮ್ಮೆ ಮಕ್ಕಳಿಗೆ ಓದುವ ಬರೆಯುವ ಸಮಯ ನಿಗದಿ ಮಾಡಿ ರುಚಿ ಹಚ್ಚಿದರೆ ಸಾಕು ಮುಂದೆ ಮಕ್ಕಳು ಅದನ್ನೆ ಮುಂದುವರೆಸುತ್ತಾರೆ.
ಮಕ್ಕಳು ಅತ್ಯಂತ ಮುಗ್ಧರಿರುತ್ತಾರೆ. ಅವರು ಏನಾದರು ಸುಳ್ಳು, ಮೋಸ, ಅಸಭ್ಯ ವರ್ತನೆ, ಕಲಿತಿದ್ದರೆ ಅದು ನಿಮ್ಮ ಕುಟುಂಬದಿಂದಲೇ ಎನ್ನುವ ಸತ್ಯ ಮಾತ್ರ ಮರೆಯಬೇಡಿ. ಮಕ್ಕಳು ನಮ್ಮನ್ನು ಅನುಕರಣೆ ಮಾಡುತ್ತಾರೆ. ನೀವು ಮನೆಯಲ್ಲಿಯೇ ಇದ್ದು ಮೂಬೈಲ್ ನಲ್ಲಿ ನಿಮ್ಮ ಗೆಳೆಯನಿಗೆ ಹೊರಗಡೆಯಿದ್ದೇನೆ ಎಂದು ಸಾಮಾನ್ಯವಾಗಿ ಹೇಳುವ ಸುಳ್ಳು ಮಗು ಅನುಸರಿಸುತ್ತದೆ. ಮಕ್ಕಳು ಓದುವ ವಿಷಯಗಳಲ್ಲಿ ದೈನಂದಿನ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಮತ್ತು ಅವರು ಸರಿಯಾಗಿ ಕಾರ್ಯನಿರ್ವಹಿಸದ ವಿಷಯದ ಬಗ್ಗೆ ಕಾಳಜಿ ವಹಿಸಿ. ಮಕ್ಕಳು ಸರಿಯಾದ ಅವರಗೆ ನೀಡಿದ ಕೆಲಸ ಮಾಡದೇಯಿದ್ದರೆ ಅವರನ್ನು ಪ್ರೀತಿಯಿಂದ ತಿಳಿಸ ಹೇಳಲು ಪ್ರಯತ್ನಿಸಿ.
ನಾವು ಶಾಲೆಗಳಿಂದ ಪುಸ್ತಕ ಪಾಠಗಳನ್ನು ನಿರೀಕ್ಷಿಸಿಬಹುದಾಗಿದೆ ಆದರೆ ಅವರ ಮೂಲ ಶಿಕ್ಷಣವು ಅವರ ಭವಿಷ್ಯಕ್ಕೆ ಆಧಾರಸ್ತಂಭವಾಗಿದೆ. ಮಕ್ಕಳಿಗೆ ಮೂಲ ಜೀವನಾಧಾರಿತ ಶಿಕ್ಷಣ ದೊರೆಯುವುದು ನಮ್ಮ ಮನೆಗಳಿಂದ. ನಮ್ಮೆಲ್ಲರ ಮನಸ್ಸುಗಳಿಂದ. ಸಂಬಂಧಗಳೆಂದರೆನು, ಬದುಕು ಎಂದರೇನು, ಕಷ್ಟ ಸುಖಗಳ ಅನುಭವ ಇವೆಲ್ಲವೂ ಮನೆಯೇ ಕಟ್ಟಿಕೊಡಬೇಕು. ಅದಕ್ಕಾಗಿ ಮಕ್ಕಳ ಬದುಕಿನ ಶಿಕ್ಷಣ ಸಂಸ್ಕಾರ ಶಿಕ್ಷಣ ಕಲಿಸುವ ಪಾಲಕರು ಎಚ್ಚೆತ್ತುಕೊಳ್ಳಬೇಕು. ಮನೆಯಂಬ ಪಾಠಶಾಲೆ ಪ್ರತಿನಿತ್ಯ ಪ್ರಾರಂಭವಾಗಿ ಮಕ್ಕಳು ಕಲಿಯುತ್ತಿರಬೇಕು.
ಪಾಲಕರಾದವರು ಆಗಾಗ ನಿಮ್ಮ ಮಕ್ಕಳು ಕಲಿಯುವ ಶಾಲೆಗೆ ಭೇಟಿ ನೀಡಿ. ನಿಮ್ಮ ಮಗು ಚೆನ್ನಾಗಿ ಕಲಿತಾಗ ಶಿಕ್ಷಕರಿಗೆ ಸ್ಪೂರ್ತಿಯ ಮಾತುಗಳನ್ನು ಹೇಳಿ. ತೊಂದರೆಯೆನಿಸಿದರೆ ಶಿಕ್ಷಕರೊಂದಿಗೆ ಸಭ್ಯತೆಯಿಂದ ಮಾತನಾಡಿ ತಿಳಿಸಿ. ನಿಮ್ಮ ಶಾಲೆಯ ಶಿಕ್ಷಕರನ್ನು ಸರಿಯಾಗಿ ನೀವು ನೋಡಿಕೊಂಡು ಪ್ರೀತಿಯಿಂದ ವರ್ತಿಸಿದರೆ, ನಿಮ್ಮ ಮಕ್ಕಳಿಗೂ ಶಿಕ್ಷಕರು ಚನ್ನಾಗಿ ನೋಡಿಕೊಳ್ಳುತ್ತಾರೆ. ಶಿಕ್ಷಕರಿಗೆ ನಿಮ್ಮ ಸ್ಪೂರ್ತಿಯ ಮಾತುಗಳಿಂದ ಸಂತೋಷವಾಗುತ್ತದೆ. ಇನ್ನಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಲು ಹೆಮ್ಮೆಯಾಗುತ್ತದೆ.
ಸಾಮಾನ್ಯವಾಗಿ ಮಕ್ಕಳು ಮನೆಯ ವಾತಾವರಣದಲ್ಲಿ ಬೆಳೆಗ್ಗೆ ಬೇಗ ಏಳುವುದಿಲ್ಲ. ಬೆಳೆಗ್ಗೆ ಎಬ್ಬಿಸುವ ನಸುಕಿನಲ್ಲಿ ಓದುವಂತೆ ರೂಢಿಗೊಳಿಸಿ ಇದರಿಂದ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳು ಬರೆಯುವಾಗ ಸಹಾಯಕ್ಕೆ ಬರುತ್ತದೆ. ಮುಂಜಾನೆ ಬೇಗ ಎಚ್ಚರಗೊಳ್ಳಲು ರೂಢಿಗತಗೊಳಿಸಿ ಅವುಗಳಲ್ಲಿ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಧ್ಯಾನದಂತಹ ಕ್ರಿಯೆಯಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಮಕ್ಕಳಿಗೆ ಅಭ್ಯಾಸ ಮಾಡಲು ಅವಕಾಶವನ್ನು ಸೃಷ್ಠಿಸಿಕೊಡಿ.
ನಾವೆಲ್ಲರೂ ಕೆಲವೊಮ್ಮೆ ರಾತ್ರಿಯಲ್ಲಿ ನಡೆಯುವ ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳಿಗೆ ಹಾಜರಾಗುತ್ತೇವೆ ಮತ್ತು ನಿಮ್ಮ ಮಕ್ಕಳೊಂದಿಗೆ ತಡರಾತ್ರಿಯವರೆಗೆ ನೀವು ಅದನ್ನು ಆನಂದಿಸುತ್ತಿದ್ದರೆ. ನಂತರ ನಿಮ್ಮ ಮಗುವಿಗೆ ಮರುದಿನ ವಿಶ್ರಾಂತಿ ನೀಡಲಿ ಅಥವಾ ಮರುದಿನ ಅವರು ಶಾಲೆಗೆ ಹೋಗಬೇಕೆಂದು ನೀವು ಬಯಸಿದರೆ ತಡರಾತ್ರಿ ಕಾರ್ಯಕ್ರಮವನ್ನು ಮೊಟುಕುಗೊಳಿಸಿ ನಿಮ್ಮ ಮಕ್ಕಳ ಉತ್ತಮವಾದ ನಿದ್ರೆಗಾಗಿ ಮನೆಗೆ ವಾಪಸ್ಸಾಗಿದೆ.
ಮಕ್ಕಳಿಗೆ ನಿಮ್ಮ ಮನೆಯ ಅಂಗಳದಲ್ಲಿ ಸಮುದಾಯದಲ್ಲಿ ಮರಗಳನ್ನು ನೆಡಲು ಮತ್ತು ಅವುಗಳನ್ನು ಪೆÇೀಷಿಸುವ ಉತ್ತಮವಾದ ಅಭ್ಯಾಸ ಬೆಳೆಸಿ. ಸಾಮಾಜಿಕ ಕಳಕಳಿಯಿರುವ ವ್ಯಕ್ತಿಗಳ ಕುರಿತು ಸರಿಯಾದ ಮಾಹಿತಿ ನೀಡಿ. ನಿಮ್ಮ ಮಕ್ಕಳ ವ್ಯಕ್ತಿತ್ವ ಉತ್ತಮಗೊಳ್ಳಲು ನಿಮ್ಮ ಮಕ್ಕಳ ನಿದ್ರೆಯ ಸಮಯದಲ್ಲಿ ಪಂಚತಂತ್ರ, ಅಕ್ಬರ್ ಬಿರ್ಬಲ್, ತೆನಾಲಿ ರಾಮ ಮುಂತಾದ ಕಥೆಗಳನ್ನು ಹೇಳಿ. ಅಂತಹ ಕಥೆಗಳನ್ನು ನೀವು ಓದಿ ಅದರಂತೆ ಮಾದರಿಯಾದರೆ ಅವರು ಕೂಡ ಅನುಸರಿಸುತ್ತಾರೆ.
ಮಕ್ಕಳಿಗೆ ರಜೆಗಳಿದ್ದಾಗ ಹೊರಸಂಚಾರ, ಪ್ರವಾಸ ಕರೆದೊಯ್ಯುವ ಪದ್ಧತಿ ರೂಢಿಸಿಕೊಳ್ಳಿ. ಪ್ರತಿ ವರ್ಷ ಬೇಸಿಗೆ ರಜಾದಿನಗಳಲ್ಲಿ ನಿಮ್ಮ ಬಜೆಟ್ಗೆ ಅನುಗುಣವಾಗಿ ಪ್ರವಾಸವನ್ನು ಯೋಜಿಸಿ ಇದರಿಂದ ನಿಮ್ಮ ಮಕ್ಕಳಿಗೆ ನೀವು ಖುಷಿಕೊಡುವ ಪಾಲಕರಾಗುತ್ತೀರಿ. ನೀವು ಹೇಳುವ ಮಾತಿನಲ್ಲಿ ನಂಬಿಕೆ ಹೆಚ್ಚಾಗಿ ಉತ್ತಮವಾಗಿ ಓದುವ ಮಕ್ಕಳಾಗುತ್ತಾರೆ.
ನಿಮ್ಮ ಮಗುವಿನ ಪ್ರತಿಭೆಯನ್ನು ಅನ್ವೇಷಿಸಿ ಮತ್ತು ಅದರಲ್ಲಿ ಹೆಚ್ಚಿನದನ್ನು ಅನ್ವೇಷಿಸಲು ಅವರಿಗೆ ಸಹಾಯ ಮಾಡಿ ಸಂಗೀತ, ಕ್ರೀಡೆ, ನಟನೆ, ಚಿತ್ರಕಲೆ, ನೃತ್ಯ ಇತ್ಯಾದಿಗಳಲ್ಲಿ ಆಸಕ್ತಿ ಇರಬಹುದು ಅದು ಅವರ ಜೀವನವನ್ನು ಸುಂದರಗೊಳಿಸುತ್ತದೆ. ಬದುಕು ರಸಮಯವಾಗುವುದರ ಜೊತೆಗೆ ಇತರೆ ಕಲೆಗಳಲ್ಲಿ ಮಕ್ಕಳು ಸಾಧನೆ ಮಾಡುವ ಅನೇಕ ಸಾಧ್ಯತೆಗಳಿವೆ. ಸಾಧ್ಯವಾದರೆ ಮನೆಯ ವಾತಾವರಣದಲ್ಲಿ ಅವರ ಆಸಕ್ತಿಗೆ ತಕ್ಕಂತೆ ಅವಕಾಶ ಸೃಷ್ಠಿಸಿಕೊಡುವುದು ಉತ್ತಮವಾಗಿರುತ್ತದೆ.
ಮಕ್ಕಳಿಗಾಗಿ ಹೊಸ ಹೊಸ ಕೈರುಚಿ ಮಾಡಿಕೊಡಿ. ಮಕ್ಕಳಿಗೆ ಅವರು ಆಸಕ್ತಿ ಹೊಂದಿರುವ ಖಾದ್ಯವನ್ನು ತಯಾರಿಸಲು ಪ್ರಯತ್ನಿಸುತ್ತಾರೆ ಮತ್ತು ಅದನ್ನು ತಯಾರಿಸಲು ಸಹಾಯ ಮಾಡಲು ಹೇಳಿ. ಅವರ ಇಷ್ಟವಾಗುವ ಪಲ್ಯ, ಸಿಹಿ ಮಾಡಿಕೊಡಿ ಅದರಿಂದ ಮಕ್ಕಳು ನಿಮ್ಮನ್ನು ಹೆಚ್ಚು ಪ್ರೀತಿಸಿ ಕಲಿಕೆಯ ಕಡೆಗೆ ಹೆಚ್ಚು ಗಮನ ಹರೆಸುವ ಅವಾಶಗಳು ಹೆಚ್ಚಾಗಿವೆ.
ಸಾಮಾನ್ಯವಾಗಿ ಮನೆಗಳಲ್ಲಿ ಮಕ್ಕಳಿಗೆ ಪ್ರಶ್ನೆ ಕೇಳಲು ಅವಕಾಶವಿರುವುದಿಲ್ಲ. ದೊಡ್ಡವರು ಮಾತನಾಡುವ ಸಂದರ್ಭದಲ್ಲಿ ಮಕ್ಕಳಿಗೆ ಒಳಗೆ ಹೋಗು ಎಂದು ಹೇಳುತ್ತೇವೆ. ಈ ಪದ್ಧತಿ ಒಂದು ಹಂತದವರೆಗೂ ಸರಿಯೆನಿಸಿದರೆ ಇನೊಂದು ರೀತಿಯಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ. ನನಗೆ ಹೇಳದಂತೆ ವಿಷಯ ಏನಿದೆ ಎನ್ನುವ ಪ್ರಶ್ನೆ ಮಕ್ಕಳಿಗೆ ಕಾಡುತ್ತದೆ. ಪ್ರತಿ ಮಗುವೂ ಹುಟ್ಟಿನಿಂದಲೇ ವಿಜ್ಞಾನಿ, ನಾವು ಉತ್ತರಿಸದಿರುವ ಹಲವಾರು ಪ್ರಶ್ನೆಗಳನ್ನು ಅವರು ಹೊಂದಿದ್ದಾರೆ ಆದರೆ ನಮ್ಮ ಅಜ್ಞಾನದಿಂದ ನಾವು ಅವರ ಮೇಲೆ ನಮ್ಮ ಕೋಪವನ್ನು ತೋರಿಸಬಾರದು ಅವರ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಮತ್ತು ಅವರಿಗೆ ಹೇಳಲು ಪ್ರಯತ್ನಿಸಬೇಕು.
ನಮ್ಮ ಮಕ್ಕಳಿಗೆ ಮನೆಯಲ್ಲಿಯೇ ಶಿಸ್ತು ಮತ್ತು ಉತ್ತಮ ಜೀವನ ವಿಧಾನವನ್ನು ಕಲಿಸಬೇಕಿದೆ. ನಾವು ನಡೆದುಕೊಳ್ಳುವ ರೀತಿಯಿಂದಲೇ ಅವರು ಕಲಿಯುತ್ತಾರೆ. ನಾವು ಸುಳ್ಳು ಹೇಳಿ ಮೋಸ ಮಾಡಿ ಮಕ್ಕಳಿಗೆ ಹೀಗೆ ಮಾಡಬೇಡ ಎಂದು ಉಪದೇಶ ಮಾಡುವುದಕ್ಕಿಂತ ಸ್ವತ: ನಾವು ಮಾದರಿಯಾಗುವುದು ಅತ್ಯಂತ ಉತ್ತಮವಾದ ಕೆಲಸವಾಗಿದೆ.
ಮನೆಯಲ್ಲಿ ನೀವು ಸ್ವತಃ ಓದುವ ಮತ್ತು ಕಲಿಯುವ ಅಭ್ಯಾಸವನ್ನು ಅವರಿಗೆ ಕಲಿಸಿ ಮನೆಯಲ್ಲಿ ಹೇಗೆ ಎಲ್ಲರೂ ಸೇರಿ ಊಟ ಮಾಡುವ ಸಮಯವಿರುತ್ತದೆಯೊ ಹಾಗೆ ಓದುವ ಸಮಯ ಮಾಡಿಕೊಳ್ಳಿ ನೀವು ಕೂಡ ಓದಬಹುದು ಅಥವಾ ಓದುವುದನ್ನು ಕೇಳಿಸಿಕೊಳ್ಳಬಹುದಾಗಿದೆ. ಬಹಳ ಮುಖ್ಯವಾಗಿ ಮೊಬೈಲ್ ಬಳಸುವುದನ್ನು ತಡೆಯುವುದು ಇಂದಿನ ಅತ್ಯಂತ ಅವಶ್ಯಕವಾಗಿದೆ. ಮೊಬೈಲ್ಗಳಿಂದ ನಮ್ಮ ಮಕ್ಕಳಿಗೆ ದೂರಿವಿಡಬೇಕಾಗಿದೆ.
ಮನೆಯಲ್ಲಿ ಮಕ್ಕಳಿಗೆ ನಿಮ್ಮ ಕೆಲಸದಲ್ಲಿ ನಿಮಗೆ ಸಹಾಯ ಮಾಡಲು ಕಲಿಸಿ. ಸಣ್ಣ ಪುಟ್ಟ ಕೆಲಸಗಳು ಮಕ್ಕಳು ಭಾಗವಹಿಸಿ ಮಾಡುತ್ತಾರೆ ಅದರಿಂದ ಸಹಕಾರ ಮನೋಭಾವ ಬೆಳೆಯುತ್ತದೆ. ಮಕ್ಕಳಿಗೆ ಭಾರವಾಗುವಂತಹ ಕೆಲಸಗಳಿಗಿಂತ ಆಸಕ್ತಿಯಾಗುವ ಕೆಲಸಗಳನ್ನು ಕೊಡಿ ಪ್ರೀತಿಯಿಂದ ನಗುನಗುತಾ ಪಾಲ್ಗೊಳ್ಳುವಂತೆ ನೋಡಿಕೊಳ್ಳಿರಿ. ನಮ್ಮ ಹಿಂದಿನ ಅನುಭವದ ಆಧಾರದ ಮೇಲೆ ನಮ್ಮ ಮಕ್ಕಳ ಜೀವನವನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಮಾಡಲು ನಾವು ಅವರಿಗೆ ಸಹಾಯ ಮಾಡಬೇಕಾಗಿದೆ. ಏಕೆಂದರೆ ಈ ಭೂಮಿಯ ಮೇಲಿನ ಅತ್ಯಂತ ಸುಂದರವಾದ ಉಡುಗೊರೆ ಪ್ರಕೃತಿ ಮತ್ತು ನಮ್ಮ ಮಕ್ಕಳು. ಪ್ರಕೃತಿ ಸ್ವತಃ ಸುಂದರವಾಗಿರುತ್ತದೆ ಮತ್ತು ನಮ್ಮ ಮಕ್ಕಳ ಜೀವನವು ಸುಂದರವಾಗಿರುತ್ತದೆ.
ಮಕ್ಕಳ ಜೀವನ ಸುಂದರವಾಗಿಸುವ ಕರ್ತವ್ಯ ಪಾಲಕರ ಹೆಗಲ ಮೇಲಿದೆ. ಶಾಲೆಯಲ್ಲಿ ಶಿಕ್ಷಕರಷ್ಟೆ ಕಲಿಸಿದರೆ ಸಾಕು ಎಂದು ಕೈಕಟ್ಟಿ ಕುಳಿತು ಮಕ್ಕಳು ಕಲಿಯದೇಯಿದ್ದಾಗ ಶಿಕ್ಷಕರನ್ನು ದೂರುವ ಬದಲು ಅವರೊಂದಿಗೆ ನಾವು ಕೈಜೋಡಿಸಿ ಮಕ್ಕಳಿಗೆ ಮನೆಯಲ್ಲಿಯೂ ಕಲಿಯುವಂತಹ ಅಭ್ಯಾಸ ಮಾಡುವಂತಹ ಅವಕಾಶ ಸೃಷ್ಠಿಸಿಕೊಟ್ಟರೆ ಖಂಡಿತಾ ಮಕ್ಕಳ ಜ್ಞಾನ ನದಿಯಿಂದ ಕಡಲಾಗುತ್ತದೆ. ಪಾಲಕರು ಒಮ್ಮೆ ಯೋಚಿಸಿ ನಿಮ್ಮ ಮಕ್ಕಳ ಶೈಕ್ಷಣಿಕ ಉತ್ತಮ ಬದುಕಿಗಾಗಿ ಇಂದೆ ಯೋಜಿಸಿ ಅನುಷ್ಠಾನಗೊಳಿಸಿ.