“ನಮ್ಮದ್ದು ದೊಡ್ಡ ಕುಟುಂಬ ಆರು ಜನ ಹೆಣ್ಣು, ಮೂರು ಜನ ಗಂಡು ಮಕ್ಕಳು ನಮ್ಮ ಅಪ್ಪ ಅಮ್ಮ ತಿನ್ನೊಕ್ಕೆ ಅನ್ನ ಇಲ್ಲದಿದ್ದರು ಮಕ್ಕಳು ಹಡಿಯೋದರಲ್ಲಿ ಏನು ಕಮ್ಮಿ ಇಲ್ಲಾ” ಹತ್ತಾರು ಮಕ್ಕಳ ಹಡಿದು ಬೀದಿಗೆ ಬಿಟ್ಟರು ಯಾರು ಓದಲಿಲ್ಲಾ ಬರಿಲಿಲ್ಲಾ ಎಲ್ಲರು ಚಿಕ್ಕಂದಿನಿಂದಲೆ ಕೂಲಿ ಕೆಲಸ ಶುರು ಮಾಡಿದ್ದೀವಿ, ಎಲ್ಲರಿಗೂ ಕೂಲಿ ಮಾಡುವ ಗಂಡಂದಿರೆ ಸಿಕ್ಕರು ಜೀವನ ಶುರುವಾಯಿತು. ಇನ್ನು ಅವರಲ್ಲಿ ನನ್ನ ಕಥೆ ವಿಶೇಷ ಗಂಡ ಕುಡುಕ ಜೊತೆಗೆ ಕೆಡುಕ ಅವನೊಂದಿಗಿನ ಇಪ್ಪತ್ತು ವರ್ಷದ ಸಂಸಾರ ಎರಡುನೂರು ವರ್ಷ ಕಳೆದಂತಾಯಿತು. ದಿನಾಲು ಕುಡಿಯುವುದು, ಬಡಿಯುವುದು ಊರು ಕೇರಿಗೆ ಬೈಯುವುದು ಆರ್ಭಟ ಅತಿಯಾದರು ಹೊಸದರಲ್ಲಿ ಸ್ಪಲ್ಪ ಸರಿಯಾಗಿದ್ದು ನಂತರ ವಿಚಿತ್ರವಾಗಿ ಆಡತೊಡಗಿದ.
ಈ ಓಣಿಯಲ್ಲಿಯೆ ನಮ್ಮ ಕುಟುಂಬ ವಿಶೇಷವಾಗಿತ್ತು. ನನ್ನ ಗಂಡನ ಈ ಚಿತ್ರಣ ದಿನಾಲು ಆರ್ಭಟ ನೋಡಿ ಕೇಳಿ ಅನುಭವಿಸಿ ಸಾಕಾಗಿತ್ತು. ಯಾವಾಗಲು ನನ್ನ ಜರಿಯುತ್ತಿದ್ದ ನಮ್ಮ ಕುಟುಂಬದ ಜನ್ಮ ಜಾಲಾಡುತ್ತಿದ್ದ. ಯಾಕೋ ನಾ ಅರಿಯೆ ಅವನ ಮಹಿಮೆ ಎಲ್ಲ ಬದಲಾಗದ ವಿಶೇಷ ಎನಿಸಿತು. “ಲೇ ನಿಮ್ಮಪ್ಪ ನಿಮ್ಮವ್ವ ಏನಂತ ಹಡದಾರ ನಿನಗೆ ಹಡಿದು ನನಗೆ ಕೊಟ್ರಲ್ಲಾ ನೀ ಚಂದಿಲ್ಲ, ನಿನಗೆ ಮುಟ್ಟಕ್ಕು ಮನಸಬರತ್ತಿಲ್ಲ” ಇವು ನಮ್ಮ ರಾಯರ ಆಡುವ ನನ್ನ ಯೌವ್ವನದ ಕುರಿತು ಮಾತುಗಳು .
ಇದ್ದಕ್ಕಿದ್ದಂತೆ ಒಂದು ದಿನ ನನ್ನ ಗಂಡ ಮನೆಗೆ ಬರಲೇ ಇಲ್ಲಾ ದಿನಾಲು ಸರಿಯಾದ ಸಮಯಕ್ಕೆ ಬಂದು ದಿನ ಜಗಳ ಮಾಡುವ ಗಂಡ ಕಾಣದೆ ನೆಮ್ಮದಿ ಅನಿಸಿತು. ಆದರೆ ಹೀಗೆ ಎರಡು ದಿನ ಹೋದನು. ಎಲ್ಲೂ ಸಿಕ್ಕಲ್ಲಿ ಹುಡುಕತೊಡಗಿದೆ ಸಿಕ್ಕವರಿಗೆಲ್ಲಾ ಕೇಳತೊಡಗಿದೆ. ಆದರೆ ಅವರು ಪತ್ತೆಯಾಗಲೇ ಇಲ್ಲಾ ಸುಮಾರು ಹುಡುಕಿದರು ಸಿಗಲೇ ಇಲ್ಲಾ. ಕೆಲವು ದಿನಗಳ ನಂತರ ನಾನು ಊರಿನ ಜನರ ಕಣ್ಣಲ್ಲಿ ಕೆಟ್ಟವಳಾದೆ ಗಂಡನನ್ನು ತಿಂದು ಹಾಕಿದವಳು ಎ