ನಾವು ಶಾಲೆ ಕಲಿಯುತ್ತಿದ್ದ ಸಂದರ್ಭದಲ್ಲಿ ಇಂತಹದ್ದೆ ಅನೇಕ ಕಥೆಗಳನ್ನು ಓದಿದ್ದೇವೆ. “ಕೈ ಕೆಸರಾದರೆ ಬಾಯಿ ಮೊಸರು” “ಒಗ್ಗಟ್ಟಿನಲ್ಲಿ ಬಲವಿದೆ” “ಜಾಣ ಕಾಗೆ” “ಜಾಣ ನರಿ” “ಉಪಾಯ ಬಲ್ಲವನಿಗೆ ಅಪಾಯವಿಲ್ಲ” ಹೀಗೆ ಅನೇಕ ಕಥೆಗಳು ನಮ್ಮೊಳಗಿನ ರಚನಾತ್ಮಕ ಕಲಿಕೆ ಮತ್ತು ಗುಣವನ್ನು ಹೊರಹಾಕುತ್ತಿದ್ದವು. ಬದುಕಿನಲ್ಲಿ ಯಾವ ರೀತಿಯದ್ದೆ ಕಷ್ಟಗಳು ಎದುರಾದರೂ ಅವುಗಳಿಂದ ಪಾರಾಗುವ ಜಾಣತನ ಕಲಿಸುತ್ತಿದ್ದವು. ಈ ಸಂದರ್ಭದಲ್ಲಿ ನಮ್ಮ ಕಲಿಕೆ ಸಮೃದ್ಧವಾಗಲು ಶಿಕ್ಷಕರು ಬಳಸುತ್ತಿದ್ದ ಈ ವಿಧಾನಗಳು ರಚನಾತ್ಮಕವಾಗಿದ್ದವು.
ನಿಮಗೆಲ್ಲರಿಗೂ ಈ ಕಥೆ ನೆನಪಿರಬಹುದು, “ಆರು ಜನ ಗೆಳೆಯರು ಊಟಕ್ಕೆ ಕುಳಿತುಕೊಳ್ಳುತ್ತಾರೆ. ಅವರಲ್ಲಿ ಹೊರಗಿನವರೊಬ್ಬರೂ ಇವರ ಗೆಳೆತನ ಮತ್ತು ಜಾಣತನವನ್ನು ಪರೀಕ್ಷಿಸಲು ಒಂದು ಕಂಡಿಷನ್ ಹಾಕುತ್ತಾರೆ. ನೀವು ಊಟ ಮಾಡುವಾಗ, ನಿಮ್ಮ ಕೈಯನ್ನು ಮಡಚದೆ ಊಟ ಮಾಡಬೇಕು ಎಂದು ಹೇಳುತ್ತಾರೆ. ಇದು ತಿಳಿದ ಆರು ಜನ ಗೆಳೆಯರು ಯೋಚಿಸುತ್ತಾರೆ, ಕೊನೆಯಲ್ಲಿ ಒಂದು ಯೋಜನೆ ಮಾಡುತ್ತಾರೆ. ಎಲ್ಲರೂ ಎದುರುಬದರು ಕುಳಿತುಕೊಂಡು, ಒಬ್ಬರೂ ಇನ್ನೊಬ್ಬರಿಗೆ ಉಣಿಸುತ್ತಾರೆ, ಯಾರೂ ತಮ್ಮ ತಮ್ಮ ಕೈಯನ್ನು ಮಡಿಚದೆ ಊಟ ಮಾಡಿ ಮುಗಿಸುತ್ತಾರೆ.” ಈ ಕಥೆ ನನಗೆ ಇವತ್ತಿಗೂ ಕಲಿಕೆಯ ವಿಶಿಷ್ಠ ಅನುಭವ ಕೊಡುತ್ತದೆ. ಇದರಿಂದ ಜೀವನದ ಅನುಭವಗಳ ಕಲಿಕೆಯಾಗುತ್ತವೆ.
ನಾವು ಶಾಲೆ ಕಲಿಯುತ್ತಿದ್ದ ಸಂದರ್ಭದಲ್ಲಿ ಇಂತಹದ್ದೆ ಅನೇಕ ಕಥೆಗಳನ್ನು ಓದಿದ್ದೇವೆ. “ಕೈ ಕೆಸರಾದರೆ ಬಾಯಿ ಮೊಸರು” “ಒಗ್ಗಟ್ಟಿನಲ್ಲಿ ಬಲವಿದೆ” “ಜಾಣ ಕಾಗೆ” “ಜಾಣ ನರಿ” “ಉಪಾಯ ಬಲ್ಲವನಿಗೆ ಅಪಾಯವಿಲ್ಲ” ಹೀಗೆ ಅನೇಕ ಕಥೆಗಳು ನಮ್ಮೊಳಗಿನ ರಚನಾತ್ಮಕ ಕಲಿಕೆ ಮತ್ತು ಗುಣವನ್ನು ಹೊರಹಾಕುತ್ತಿದ್ದವು. ಬದುಕಿನಲ್ಲಿ ಯಾವ ರೀತಿಯದ್ದೆ ಕಷ್ಟಗಳು ಎದುರಾದರೂ ಅವುಗಳಿಂದ ಪಾರಾಗುವ ಜಾಣತನ ಕಲಿಸುತ್ತಿದ್ದವು. ಈ ಸಂದರ್ಭದಲ್ಲಿ ನಮ್ಮ ಕಲಿಕೆ ಸಮೃದ್ಧವಾಗಲು ಶಿಕ್ಷಕರು ಬಳಸುತ್ತಿದ್ದ ಈ ವಿಧಾನಗಳು ರಚನಾತ್ಮಕವಾಗಿದ್ದವು.
0 Comments
Embarking on a journey of self-improvement and skill enhancement is always an exciting prospect. Recently, I had the privilege of participating in a 6-day content writing workshop that not only met but exceeded my expectations. This immersive experience was more than just a workshop; it was a journey of discovery, learning, and growth. Join me as I take you through the transformative six days of the workshop.
Education is often described as the key to unlocking a world of opportunities and personal growth. Its importance cannot be overstated, as it serves as the cornerstone of human progress and development. From early childhood to lifelong learning, education shapes our understanding of the world, equips us with essential skills, and empowers us to make informed decisions. In this article, we will explore the multifaceted importance of education in our lives and society.
“ಮೊನ್ನೆ ಮನೆಯಲ್ಲಿ ಮಗಳಿಗೆ, ವಿಷಯವೊಂದನ್ನು ವಿವರಿಸುವಾಗ, ಅಪ್ಪ ನೀನು ಹೇಳುತ್ತಿರುವುದು ತಪ್ಪು, ನಮ್ಮ ಮಿಸ್ ಹೇಳಿದ್ದೇ ಕರೆಕ್ಟು ಎಂದಳು” ಮಗಳ ಮಾತಿನಲ್ಲಿ ನನ್ನ ನಾನು ಕಂಡುಕೊಂಡೆ, ನಾವು ಓದುವಾಗ ಶಿಕ್ಷಕರು ಹೇಳಿದ್ದೇ ವೇದವಾಕ್ಯ ಎಂಬ ಸತ್ಯ ನೆನಪಿಗೆ ಬಂತು. ನಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಿದೆ. ಇವತ್ತಿನ ಈ ಲೇಖನದ ಮೂಲಕ, ನಮ್ಮ ಜೀವನದಲ್ಲಿ ಶಿಕ್ಷಕರ ಪ್ರಮುಖ ಪಾತ್ರದ ಬಗ್ಗೆ ಮರುಚಿಂತನೆ ಮಾಡೋಣ.
ಮೊನ್ನೆ ನನ್ನ ಪಿಯುಸಿ ಗುರುಗಳಾದ ಶ್ರೀ ಶಿವಾನಂದ ಖಜೂರಿ ಸರ್ ಅವರೊಂದಿಗೆ ಚರ್ಚಿಸುತ್ತಿರುವಾಗ, ಅವರು ಅಂದು ತರಗತಿಯಲ್ಲಿ ನಡೆದ ಘಟನೆಯನ್ನು ಹಂಚಿಕೊಂಡರು. ಆ ಘಟನೆ ನನಗೆ ಅವರ ವಿದ್ಯಾರ್ಥಿಯಾಗಿ ಸ್ಪೂರ್ತಿ ನೀಡಿತು. ಆ ಘಟನೆ ಅದಷ್ಟೋ ಆಳವಾದ ಆಲೋಚನೆಗಳಿಗೆ ಹಚ್ಚಿತು.
ಅವರು ಹೇಳಿದ ಆ ಘಟನೆ ಹೀಗಿದೆ, “ಪಿಯುಸಿ ಓದುತ್ತಿರುವ ಒಟ್ಟು ೨೦೦ ಮಕ್ಕಳಿರುವ ದೊಡ್ಡ ಹಾಲ್ನಲ್ಲಿ ಪಾಠ ಮಾಡುತ್ತಿದ್ದೆ, ಆಕಸ್ಮಿಕವಾಗಿ ಒಬ್ಬ ವಿದ್ಯಾರ್ಥಿ ಎದ್ದು ನಿಂತು, ಸರ್ ಒಂದು ಪ್ರಶ್ನೆಯಿದೆ ಎಂದ, ಆಗ ನಾನು ಸರಿ ಕೇಳಪ್ಪ ಎಂದೆ, ಆಗ ಆ ವಿದ್ಯಾರ್ಥಿ ಕೇಳಿದ ಪ್ರಶ್ನೆ “ಸರ್ ನಿಮ್ಮಲ್ಲಿ ಎಷ್ಟು ಹಣವಿದೆ? ನೀವೆಷ್ಟು ಶ್ರೀಮಂತರು? ಎಂದು ಕೇಳಿದ. ಈ ಪ್ರಶ್ನೆ ಕೇಳಿದ ತಕ್ಷಣ, ಇಡಿ ತರಗತಿ ಸೈಲೆಂಟ್ ಆಯಿತು. ನಾನು ಕೂಡಾ ಸ್ವಲ್ಪ ಚಿಂತಿತನಾಗಿ ಸರಿ, ಕುಳಿತುಕೊಳ್ಳಿ ಉತ್ತರ ಹೇಳುವೆ ಎಂದು ಸ್ವಲ್ಪ ಯೋಚನೆ ಮಾಡಿ ಈ ಕೆಳಗಿನಂತೆ ಉತ್ತರ ಕೊಟ್ಟೆ. |
ಇಲ್ಲಿಯವರೆಗೆ...
October 2023
"
|