ಏನು ತಿಳಿಯದ ವಯಸ್ಸಲ್ಲಿ ನಮಗೆ ತಿಳಿದೊ, ತಿಳಿಯದೊ ಈ ಪ್ರೀತಿ ಪ್ರೇಮದಲ್ಲಿ ಬೀಳುತ್ತೇವೆ. ಇದೆನಾ ಪ್ರೀತಿ ಎಂದು ತಿಳಿದಾಗ ನಮಗೆ ಅರಿವಿಲ್ಲದೆ ಏನೆಲ್ಲಾ ಆಗಿಬಿಟ್ಟಿರುತ್ತೆ ಅಲ್ಲವಾ? ಇದು ಸತ್ಯ ಅಂದು ಶಾಲೆಯ ಮೇಸ್ಟ್ರು ಪಾಠ ಮಾಡುವಾಗ "ನೀವು ಈಗ ಓದುವುದು ಬರೆಯುವುದು ಬಿಟ್ಟು ಬೇರೆ ಯೋಚನೆ ಮಾಡಿದರೆ. ನಿಮ್ಮ ಮುಂದಿನ ಬದುಕು ತುಂಬಾ ಕಷ್ಟಕರವಾಗಿರುತ್ತೆ. ಅದೇ ಈಗ ನೀವು ಕಷ್ಟ ಇಷ್ಟದೊಂದಿಗೆ ಸರಿಯಾಗಿ ಓದಿದರೆ ನಿಮ್ಮ ಬದಕು ಸುಂದರವಾಗುತ್ತೆ. ಯೋಚಿಸಿ ಎಂದು.
0 Comments
ಅಂದು ನಾವು ಗೆಳೆಯರೆಲ್ಲರು ಹೋಟೆಲ್ ವೊಂದರಲ್ಲಿ ಕುಳಿತ್ತಿದ್ದೇವು ,ಆ ಕಡೆಯಿಂದ ವಿಶ್ವ ಓಡಿ ಬಂದ ನಾನು ಜೋಕ್ ನಿಂದ ಸವಕಾಶ ತಂದೆ ಇಲ್ಲಿ ಯಾರು ವೈಕುಂಠಕ್ಕೆ ಹೋಗಿಲ್ಲಾ ಎಂದೆ ನಂತರ ವಿಶ್ವನಿಗೆ ಸಂತೈಸಿ ಕೂಡಿಸಿ ವಿಚಾರಿಸಿದೇವು ಎಲ್ಲರು ಕುತುಹಲಕಾರಿಯಾಗಿ ಅವನ ಪ್ರೇಮ ಕಥೆ ಕೇಳಿದೇವು. ಅದರ ಸಾರಾಂಶ ಇಲ್ಲಿದೆ. “ ವಿಶ್ವ ತುಂಬಾ ಓದಬೇಕು, ಸರಕಾರಿ ನೌಕರಿ ಮಾಡಬೇಕು, ಎನ್ನುವ ಹಂಬಲದ ಹುಡುಗ ಅವನ ಮನೆಯಲ್ಲಿ ತಂದೆ ತಾಯಿ ಅಕ್ಕ ತಮ್ಮ ಇದ್ದರು.ವಿಶ್ವ ಒಂದು ತುಂಬಿದ ಮನೆಯ ಮಗನಾಗಿದ್ದು ಅಪ್ಪ ನಿವೃತ್ತ ಶಿಕ್ಷಕ ಅಕ್ಕ ಕೂಡಾ ಈಗಾಗಲೇ ಒಂದು ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅಮ್ಮ ಗೃಹಿಣಿ ತನ್ನ ಮಗ ಚಿಕ್ಕಂದಿನಿಂದಲೂ ಚೆನ್ನಾಗಿ ಓದಬೇಕು, ಬರೆಯಬೇಕು, ಯಾವಾಗಲು ಮೊದಲನೆ ಸ್ಥಾನದಲ್ಲಿ ನನ್ನ ಮಗ ಇರಬೇಕು ಎನ್ನುವ ಆಸೆಯವರು.
“ರಾತ್ರಿ ಹನ್ನೆರಡರ ಸಮಯ ಆ ಕಡೆಯಿಂದ ಕರೆ ಬಂತು ಲೋ ಏಳೋ ನನ್ನ ಜೀವ ಹೋಗುತ್ತಿದೆ . ನಿನ್ನ ನೆನಸುತ್ತಿದೆ . ಕತ್ತೆ ನನ್ನ ನೆನಪು ಮಾಡುತ್ತಿಲ್ಲ ನಾಳೆ ನಾನು ಎಲ್ಲ ಬಿಟ್ಟು ನಿನ್ನ ಜೊತೆಗೆ ತಯಾರಾಗಿದ್ದೇನೆ . ನನ್ನ ಎದೆ ಹೊಡೆದುಕೊಳ್ಳುತ್ತಿದೆ . ನನ್ನ ಅಮ್ಮ ಒಬ್ಬಳೆ ಆಗತಾಳೆ ನಾನು ನಿನ್ನ ಹತ್ತಿರ ಬಂದರೆ ಅವಳನ್ನು ಬಿಟ್ಟು ಹೇಗೆ ಬರಲಿ ಅಂತಾ ಯೋಚನೆ ಕತ್ತೆ ನಿನಗೆ ನನ್ನ ಹೃದಯ ಕೊಟ್ಟು ನಿನಗೆ ಪ್ರೀತಿ ಮಾಡುತ್ತಿದ್ದೇನೆ . ನಿನಗೂ ಬಿಡದೆ ಅವಳಿಗೂ ಬಿಡದೆ ಚಿಂತೆ ಆಗುತ್ತಿದೆ ಆದರೂ ಅಮ್ಮನ ಮರೆತು ನಿನ್ನ ಜೋಡಿ ಬರುತ್ತಿದ್ದೇನೆ. ನನ್ನ ಪ್ರೀತಿಯಿಂದ ನೋಡಕೊಬೇಕು ಇಲ್ಲದಿದ್ದರೆ ನಾನು ಸಾಯುವೆ , ಲೇ ಏನ ಆಗಲ್ಲಾ ನಾಳೆ ಬಾ ಮುಂದೆ ಏನೆ ಆದರೂ ನೋಡಿಕೊಳ್ಳೋಣಾ ಈಗ ಮಲಗು ಚಿನ್ನ ಬಾಯ್ ನಾಳೆ ಸಿಗತೀನಿ . ಕಾಲ್ ಕಟ್ ಆಯಿತು .
ಓಡುವ ರೈಲು ಹಿಡಿಯಲಾಗದು , ಓಡುವ ಗಾಳಿಯ ತಡೆಯಲಾಗದು ಅಂತೆಯೆ ಕನ್ನಡ ಬರೆಯುವಾಗ ಲೇಖನ ಚಿಹ್ನೆಗಳಿಲ್ಲದ ಯಾವ ಬರಹವು ಓದಲು ಆಗದು . ಹೌದು ಕನ್ನಡ ಭಾಷೆ ಒಂದು ಸುಂದರ ಆಕಾರ ಮತ್ತು ಶೈಲಿಯನ್ನು ಹೊಂದಿರುವದು . ಅದರ ಸೌಂದರ್ಯಕ್ಕೆ ಸಾಟಿಯೆ ಇಲ್ಲಾ ಎನ್ನಬಹುದು ಅದರ ಸೊಗಸಾದ ಅರ್ಥಗಳು ಎಲ್ಲರ ಮನಮುಟ್ಟಿ ಹಾಗೆ ಅವರ ಹೃದಯ ಪ್ರವೇಶಿಸುವ ಜಾಣತನ ಈ ಭಾಷೆಯ ಬರವಣಿಗೆಗೆ ಇದೆ ಎಂದರೆ ತಪ್ಪಾಗದು .ಹೀಗೆ ನಮ್ಮ ಕನ್ನಡ ಭಾಷೆ ಬೆಳೆದು ಬಂದು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ . ಆದರೆ ಸ್ವಲ್ಪ ಬೇಜಾರಾಗುವ ಸಂಗತಿಯೆಂದರೆ ನಮ್ಮ ಶಾಲೆಗಳು ಮಾತ್ರ ಈ ಭಾಷೆ ಕಲಿಸುವಲ್ಲಿ ಎಡವುತ್ತಿವೆ ಎಂದು ಭಾಸವಾಗತ್ತಿದೆ . ನಿಮ್ಮ ಶಾಲೆ ಹಾಗೂ ಆ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ ನಮ್ಮ ಕನ್ನಡ ಮೇಸ್ಟ್ರು ಈ ಚಿಹ್ನೆಗಳು ಇಷ್ಟು ಮಹತ್ವ ಎಂದು ಕಲಿಸಲಿಲ್ಲಾ ಇದು ಪ್ರಾಥಮಿಕ ಹಂತಲ್ಲೆ ಸರಿಯಾಗಿ ಕಲಿತಿದ್ದಲ್ಲಿ ಈಗ ನಮಗೆ ತೊಂದರೆಯಾಗುತ್ತಿರಲಿಲ್ಲಾ .
|
ಇಲ್ಲಿಯವರೆಗೆ...
October 2023
"
|