ಬರೋಬ್ಬರಿ ಒಂದು ವರ್ಷ ಆಯಿತ್ ನೋಡ್ರೀ, ನಮ್ಮ ದೇಶದಾಗ ಒಂದು ತರಹದ ಶಾಂತಿ, ನೆಮ್ಮದಿ ಮೂಡ್ಯಾದಾ. ಅದೆಷ್ಟೊ ದಿನದ ಕನಸು ನೆನಸಾಗತಿದೆ ಅನಿಸಲಖತಾದ, ನಮ್ಮೂರಿನಾಗ ಅದೇನೊ ಅಕೌಂಟ್ ಮಾಡಿದಿರೆ ಒಂದಿಷ್ಟು ಒಳ್ಳೆಯ ಲಾಭಯಿದೆ ಅಂತ ನಮ್ಮೂರಿನ ಹುಡುಗರು ಹೇಳಖತ್ಯಾರ. ಮೋದಿ ಅನ್ನೊ ಮನುಸಾ ನಮ್ಮಂತಹ ಬಡವರ ಮಂದಿಗಿ ಎಷ್ಟೊ ಹೊಸ ಯೋಜನೆಗಳು ಹೊರಗ ತಂದಾನಂತ. ಎಲ್ಲರಿಗೂ ಒಂದು ವರ್ಷದಾಗ ಒಳ್ಳೆಯ ಕೆಲಸಗಳು ಮಾಡ್ಯಾನಂತ. ಒಂದು ವರ್ಷದಾಗ ಕೆಟ್ಟ ಕೆಲಸನಾ ಮಾಡಿಲ್ಲ ಅಂತ ನೋಡ್ರೀ ಸರಕಾರ ಅಂದ್ರ ಹಿಂಗಿರಬೇಕು.
0 Comments
ಇದೀಗ ಶಾಲೆಗಳು ಪ್ರಾರಂಭವಾಗಿವೆ. ಮಕ್ಕಳೆಲ್ಲ ಶಾಲೆಗಳತ್ತ ಹೆಜ್ಜೆ ಹಾಕಿದ್ದಾರೆ. ಕೆಲವು ಮಕ್ಕಳಿಗೆ ಮೊದಲ ಅನುಭವವಾದರೆ, ಇನ್ನೂ ಕೆಲವು ಮಕ್ಕಳಿಗೆ ಚಿಕ್ಕ ಅನುಭವವಿದೆ. ಶಾಲೆಗೆ ಹೋಗುವುದಿಲ್ಲ ಎಂಬ ಹಠ ಮಾಡುವ ಮಕ್ಕಳಿದ್ದಾರೆ. ಸಂತೋಷವಾಗಿ ಶಾಲೆಗೆ ಓಡುವ ಮಕ್ಕಳಿದ್ದಾರೆ. ನಮ್ಮ ಮಗು ಶಾಲೆಗೆ ಹೋಗುತ್ತಿಲ್ಲ ಎಂಬ ಪಾಲಕರಿದ್ದಾರೆ. ಇದೀಗ ನಗರಗಳಲ್ಲಿ ಮಕ್ಕಳನ್ನು ಹೊತ್ತ ಆಟೋಗಳು, ಶಾಲಾ ವಾಹನಗಳು ಕಾಣಬರುತ್ತಿವೆ. ಶಾಲಾವಾಹನ ಮನೆಗೆ ಬಂದಾಗ ಮಕ್ಕಳಿಗೆ ಹತ್ತಿಸಿ ಟಾಟಾ ಮಾಡುವ ನೈಟಿ ಹಾಕಿರುವ ಆಂಟಿಗಳು ಕೂಡ ಕಾಣುತ್ತಿದ್ದಾರೆ.
ಇತ್ತೀಚಿನ ಶೈಕ್ಷಣಿಕ ಫಲಿತಾಂಶದ ಪ್ರಕಾರ ಹುಡುಗಿಯರೇ ಮೇಲಯಗೈ ಸಾಧಿಸಿದ್ದಾರೆ. “ಹೆಣ್ಣು ದೇಶದ ಕಣ್ಣು” “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” “ಹೆಣ್ಣು ಸಮಾಜದ ಕಣ್ಣು” ಎಂಬ ಟ್ಯಾಗ್ಲೈನ್ ಮೂಲಕ ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕರು ಮಹಿಳಾ ಶಿಕ್ಷಣದ ಬಲವರ್ಧನೆಗಾಗಿ ಅನೇಕ ಯೋಜನೆಗಳ ಮೂಲಕ ದುಡಿಯುತ್ತಿದ್ದಾರೆ. ಹೆಣ್ಣಿನ ಸುಸ್ಥಿರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಭಾರತದ ಭುವಿಯಲ್ಲಿ, ಭ್ರಷ್ಠಾಚಾರವೆಂಬ ಪಡೆಂಬೂತ ತಾಂಡವ ಆಡುತ್ತಿರುವಾಗ, ಮೋದಿಯೆಂಬ ಮೋಡಿಗಾರ ಭಾರತದಲ್ಲಿ ಪಡೆಂಬೂತ ಓಡಿಸಿ ಸಂಚಲನವ ಮೂಡಿಸಿದ್ದರು. ಇಡಿ ಭಾರತವೇ ತನ್ನೆಡೆಗೆ ಎಳೆದುಕೊಂಡರು. ಭಾರತದ ಪ್ರತಿ ಪ್ರಜೆಯು ಮೋದಿಯವರನ್ನ, ಅವರ ಮಾತುಗಳನ್ನು ಕೇಳಬೇಕು ಎಂಬ ಬಯಕೆ ಹುಟ್ಟಿಸಿದರು. ಕಳೆದ ವರ್ಷ ಈ ದಿನಗಳಲ್ಲಿ ಎಲ್ಲೆಂದರಲ್ಲಿ ಭಾಷಣಗಳು, ಮಾತುಗಳು, ಸಮಾರೋಪಗಳು ತುಂಬಿದ್ದವು. ದೇಶದ ಯಾವುದೇ ಮಾಧ್ಯಮದಲ್ಲಿಯಾದರೂ ಮೋದಿಯೆಂಬ ಮಂತ್ರ ಮಾತ್ರ ಜಪಿಸುವಂತಾಯಿತು. ಇದರ ಫಲವೇ ಇಂದು ಒಂದು ವರ್ಷ ಪ್ರಜಾಪ್ರಭು ನೀಡಿದ ಅವಕಾಶವನ್ನು ಮೋದಿಯೆಂಬ ಮೋಡಿಗಾರ ಒಂದು ಹಂತದ ಯಶಸ್ವೀಯಾಗಿ ಮುಗಿಸಿದ್ದಾರೆ.
|
ಇಲ್ಲಿಯವರೆಗೆ...
October 2023
"
|